ಜಿಲ್ಲೆ

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಶೇ.೫೦ ರಿಯಾಯಿತಿ

ವಿದ್ಯಾ ಶೆಟ್ಟನಗೌಡ್ರ

ಕಾಗವಾಡ: ಸರ್ಕಾರ ಅಂಗವಿಕಲರಿಗಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ೧೦೦ ದಿನಗಳ ಉದ್ಯೋಗವನ್ನು ಖಾತ್ರಿಪಡಿಸಿದ್ದು, ಗ್ರಾಮದ ಅಂಗವಿಕಲರು ಇದರ ಲಾಭ ಪಡೆದುಕೊಳ್ಳಬೇಕೆಂದು ತಾಲೂಕು ಪಂಚಾಯಿತಿ ಇಒ ವೀರಣ್ಣ ವಾಲಿ ತಿಳಿಸಿದರು.

ತಾಲೂಕಿನ ಮಂಗಸೂಳಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ಗ್ರಾಮದ ೭೩ ಅಂಗವಿಕಲರಿಗೆ ಜಾಬ್‌ಕಾರ್ಡ್ ವಿತರಿಸಿ, ಮಾತನಾಡಿದರು. ಸರ್ಕಾರ ಈಗಾಗಲೇ ನರೇಗಾ ಯೋಜನೆಯಡಿ ಗ್ರಾಮದ ಪ್ರತಿ ಕುಟುಂಬಗಳಿಗೆ ೧೦೦ ದಿನಗಳ ಉದ್ಯೋಗ ಖಾತ್ರಿ ನೀಡಿವುದರ ಜತೆಗೆ ಕುಟುಂಬದ ಸದಸ್ಯರಲ್ಲಿ ಅಂಗವಿಕಲರಿಗೆ ಉದ್ಯೋಗ ಖಾತ್ರಿ ನೀಡಿದ್ದು, ಅವರ ಕೂಲಿ ಕೆಲಸದ ಅವಽಯಲ್ಲಿ ಶೇ.೫೦ರಷ್ಟು ರಿಯಾಯಿತಿ ನೀಡಲಾಗಿದ್ದು, ಇದರಿಂದ ಅಂಗವಿಕಲರಿಗೆ ಸ್ವಾವಲಂಬಿ ಜೀವನ ಸಾಗಿಸಲು ಅನುಕೂಲವಾಗಲಿದೆ ಎಂದರು.

ತಹಸೀಲ್ದಾರ್ ರಾಜೇಶ ಬುರ್ಲಿ, ಮುಖಂಡರಾದ ರವೀಂದ್ರ ಪೂಜಾರಿ, ಗ್ರಾಪಂ ಅಧ್ಯಕ್ಷ ಬಾಳು ಭಜಂತ್ರಿ, ಉಪಾಧ್ಯಕ್ಷೆ ಸವಿತಾ ಪಾಟೀಲ, ಪಿಡಿಒ ಸಂಜಯ ಸೂರ್ಯವಂಶಿ ಇತರರಿದ್ದರು.