ಬಸವಕಲ್ಯಾಣ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಲಾಭವನ್ನು ಬಡ ಕಾರ್ಮಿಕರು ಪಡೆದುಕೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ ಸುಲ್ಫಿ ಸಲಹೆ ನೀಡಿದರು.
ಗ್ರಾಮ ಸ್ವರಾಜ್ ಅಭಿಯಾನ ಕರ್ನಾಟಕ(ನಾಗರಿಕ ಸಮಾಜ ಸಂಸ್ಥೆ ಒಕ್ಕೂಟ) ಖಾತ್ರಿ ಯೋಜನೆ ಸಹಯೋಗದಡಿ ತಾಪಂ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾಯಕ ಬಂಧುಗಳ(ಮೇಟ್ಸ್) ತರಬೇತಿ ಉದ್ಘಾಟಿಸಿದ ಅವರು, ನರೇಗಾದಡಿ ಸಾಕಷ್ಟು ಹುದ್ದೆ ನೀಡಲಾಗಿದೆ. ಅದರಲ್ಲಿ ಗ್ರಾಮೀಣ ಹಂತದಲ್ಲಿ ಮೇಟ್ಸ್ ಪಾತ್ರ ಪ್ರಮುಖ. ಹೀಗಾಗಿ ಕಾರ್ಮಿಕರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಮೇಟ್ಸ್ಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ತಾಪಂ ಸಹಾಯಕ ನಿರ್ದೇಶಕ ಸಂತೋಷ ಚವ್ಹಾಣ್ ಮಾತನಾಡಿ, ಬಡವರಿಗಾಗಿ ಇರುವ ನರೇಗಾ ಯೋಜನೆ ಬಗ್ಗೆ ಗ್ರಾಮೀಣ ಭಾಗದಲ್ಲಿ ಕೂಲಿ ಕಾರ್ಮಿಕರಿಗೆ ತಿಳಿಸುವ ಮೂಲಕ ಕೆಲಸ ಕೊಡುವ ಜವಾಬ್ದಾರಿ ನಿಮ್ಮದು. ಇಲ್ಲಿ ಕಲಿಸುವ ವಿಷಯಗಳ ಮನನ ಮಾಡಿಕೊಳ್ಳುವ ಮೂಲಕ ಜನರಿಗೆ ಮುಟ್ಟಿಸಬೇಕು ಎಂದರು.
ತರಬೇತಿ ರಾಜ್ಯ ಸಂಪನ್ಮೂಲ ವ್ಯಕ್ತಿ ನಾಗರಾಜ ಶೀಲವಂತ ಪ್ರಾಸ್ತಾವಿಕ ಮಾತನಾಡಿದರು. ತಾಪಂ ಸಹಾಯಕ ನಿರ್ದೆಶಕ (ಪಂ.ರಾ) ಅರುಣಕುಮಾರ ಪಾಟೀಲ್, ವೀರಾರೆಡ್ಡಿ, ಚಾಮಲಾ, ಅಮರಪಲ್ಲಿ, ನಟರಾಜ ಇತರರಿದ್ದರು.