ಇತ್ತಿಚಿಗೆ ಭರತೇಶ ಶೀಕ್ಷಣ ಸಂಸ್ಥೆಯ ಜೆ.ಜಿ.ಎನ್.ಡಿ. ಭರತೇಶ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪದವಿ ವಿದ್ಯಾರ್ಥಿಗಳ ಬಿಳ್ಖೋಡುಗೆ ಸಮಾರಂಭದಲ್ಲಿ ಡಾ.ಅಶ್ವಿನಿ ಜಾಮುನಿ ಅವರು ಮಾತನಾಡಿದರು. ವಿನೋದ ದೊಡ್ಡಣ್ಣವರ, ಸುನಿತಾ ದೇಶಪಾಂಡೆ ಉಪಸ್ಥಿತರಿದ್ದರು.  
ಜಿಲ್ಲೆ

ಉದ್ಯೋಗ ಕ್ಷೇತ್ರದಲ್ಲಿ ವಿಪುಲ ಅವಕಾಶ- ಡಾ.ಅಶ್ವಿನಿ ಜಾಮುನಿ

ಬೆಳಗಾವಿ:ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮತ್ತು ಉದ್ಯೋಗ ಕ್ಷೇತ್ರದಲ್ಲಿ ವಿಪುಲ ಅವಕಾಗಳಿದ್ದು, ಈ ಅವಕಾಶಗಳನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕೆಂದು ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ ವಾಣಿಜ್ಯ ಸಂಶೋಧನಾ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಅಶ್ವಿನಿ ಜಾಮುನಿ ಅವರು ಹೇಳಿದರು.
ಇತ್ತಿಚಿಗೆ ಭರತೇಶ ಶೀಕ್ಷಣ ಸಂಸ್ಥೆಯ ಜೆ.ಜಿ.ಎನ್.ಡಿ. ಭರತೇಶ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪದವಿ ವಿದ್ಯಾರ್ಥಿಗಳ ಬಿಳ್ಕೋಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ವಾಣಿಜ್ಯ ಕ್ಷೇತ್ರದಲ್ಲಿ ಬಹಳಷ್ಟು ಅವಕಾಶಗಳಿವೆ. ತಮಗೆ ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವುದು ಜಾಣತನ. ಹಾಗಾಗಿ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಮಾರಂಭದಲ್ಲಿ ವರ್ಷದ ಅತ್ಯುತ್ತಮ ವಿದ್ಯಾರ್ಥಿಗಳೆಂದು ಆಯ್ಕೆಯಾದ ನೇಹಾ ಹಿರೆಕೋಡಿ, ಸ್ವಾತಿ ಶಹಾಪೂರಕರ, ಜ್ಯೋತಿ ಮರಗನಕೊಪ್ಪ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಭರತೇಶ ಶೀಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ ಅವರು ವಹಿಸಿದ್ದರು. ಪ್ರಾಚಾರ್ಯ ಸುನಿತಾ ದೇಶಪಾಂಡೆ ಅತಿಥಿಗಳನ್ನು ಸ್ವಾಗತಿಸಿದರು. ಸುಪರ್ಣಾ ಲಗಮನ್ನವರ ಪರಿಚಯಸಿದರು. ಜ್ಯೋತಿ ಚಡಚಾಲ ವಂದಿಸಿದರು. ಆಯೇಶಾ ಮತ್ತು ಭಾವನಾ ಕಾರ್ಯಕ್ರಮ ನಿರೂಪಿಸಿದರು.