ಜಿಲ್ಲೆ

ಉದ್ಯಾನ ಕಬಳಿಕೆ ತಡೆಗೆ ಜನಾಗ್ರಹ

ನಿಪ್ಪಾಣಿ: ಶ್ರೀ ಜಗಜ್ಯೋತಿ ಮಹಾತ್ಮಾ ಬಸವೇಶ್ವರ ಉದ್ಯಾನಕ್ಕಾಗಿ ಮೀಸಲಿಟ್ಟ ಸ್ಥಳೀಯ ಅಶೋಕನಗರದಲ್ಲಿ ನಗರಸಭೆಗೆ ಸೇರಿದ ೧.೦೩ ಎಕರೆ ಜಗ ಕಬಳಿಸುವ ಹುನ್ನಾರ ನಡೆದಿದೆ. ಇದಕ್ಕೆ ತಡೆಯೊಡ್ಡಿ ಉದ್ಯಾನಕ್ಕಾಗಿಯೇ ಜಾಗ ಕಾಯ್ದಿರಿಸಬೇಕು ಎಂದು ಒತ್ತಾಯಿಸಿ ನಾಗರಿಕರು ಬುಧವಾರ ಪೌರಾಯುಕ್ತ ಮತ್ತು ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.

ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಮಾತನಾಡಿ, ಆ ಜಗಕ್ಕೆ ಮಹಾತ್ಮಾ ಬಸವೇಶ್ವರರ ಹೆಸರು ಬಿಟ್ಟು ಬೇರೆ ಹೆಸರು ಇಡಬಾರದು ಹಾಗೂ ಇತರ ಉಪಯೋಗಕ್ಕಾಗಿ ಅದರ ಉಪಯೋಗ ಆಗಬಾರದು ಎಂಬುವುದು ಸಮುದಾಯದ ಬೇಡಿಕೆಯಾಗಿದೆ ಎಂದರು. ಸ್ಥಳೀಯ ವಿದ್ಯಾ ಸಂವರ್ಧಕ ಮಂಡಳದ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಮಾತನಾಡಿದರು.

ಅಧ್ಯಕ್ಷೆ ಸೋನಲ್ ಕೊಠಡಿಯಾ ಮನವಿ ಸ್ವೀಕರಿಸಿ, ನಿಮ್ಮ ಮನವಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.

ಪ್ರಾಣಲಿಂಗ ಸ್ವಾಮೀಜಿ, ಬಸವ ಮಲ್ಲಿಕಾರ್ಜುನ ಸ್ವಾಮೀಜಿ, ಮಹಾಲಿಂಗೇಶ ಕೋಠಿವಾಲೆ, ಸುರೇಶ ಶೆಟ್ಟಿ, ಅನಿಲ ನೇಷ್ಠಿ, ವಜ್ರಕಾಂತ ಸದಲಗೆ, ಸಮೀರ ಬಾಗೇವಾಡಿ, ದೀಪಕ ಪಾಟೀಲ, ರಾಜು ಹಿರೇಕೊಡಿ, ಸುನೀಲ ನೇಜೆ, ಮಲ್ಲಿಕಾರ್ಜುನ ಕೋಳಕಿ, ಬಾಬುರಾವ ಅಲತಗಿ, ಪ್ರವೀಣ ಬೆಲ್ಲದ, ನರೇಂದ್ರ ಬಾಡಕರ, ಅಶೋಕ ಲಿಗಾಡೆ ಇತರರಿದ್ದರು.