ಬಾಗಲಕೋಟೆ: ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತಾ ಮನೋಭಾವ ಮುಖ್ಯವಾಗಿದ್ದು, ಸ್ಟಾರ್ಟ್ಅಪ್ ಇಂಡಿಯಾ ಯೋಜನೆಯ ಸದುಪಯೋಗ ಪಡಿಸಿಕೊಳ್ಳಿ ಎಂದು ಬೆಳಗಾವಿಯ ದಿಗ್ವಿಜಯ್ ಲಾಜಿಸ್ಟಿಕ್ಸ್ ಪ್ರೈ.ಲಿ.ನ ವಾಣಿಜ್ಯೋದ್ಯಮಿ ನಿರ್ದೇಶಕ ದಿಗ್ವಿಜಯ್ ಎಸ್. ಸಿದ್ನಾಳ ಹೇಳಿದರು.
ನಗರದ ಪ್ರತಿಷ್ಠಿತ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಬಿ.ಬಿ.ಎ ವಿಭಾಗದ ವತಿಯಿಂದ ನೂತನ ಸಭಾಂಗಣದಲ್ಲಿ ಗುರುವಾರ ನಡೆದ ಒಂದು ದಿನದ ರಾಜ್ಯ ಮಟ್ಟದ "ಮೆಗಾ ಮ್ಯಾನೇಜ್ಮೆಂಟ್ ಫೆಸ್ಟ" ನಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ 18 ರಿಂದ 22 ವಯಸ್ಸಿನ ಅವದಿ ಬಹಳ ಮುಖ್ಯವಾಗಿದ್ದು, ಶ್ರಮ ಪಟ್ಟು ಬದ್ರ ಬುನಾದಿ ಹಾಕಲು ಇರುವ ಅತ್ಯುತ್ತಮ ಅವದಿಯಾಗಿದೆ, ಸ್ಟಾಟರ್ಪ ಇಂಡಿಯಾದಲ್ಲಿ ಸಾಲ ಸೌಲಭ್ಯವನ್ನು ಪಡೆದು ನಿಮ್ಮದೆಯಾದ ಸ್ವಂತ ಉದ್ಯೋಗ ಮಾಡಬಹುದು, ಇತ್ತೀಚಿನ ದಿನಗಳಲ್ಲಿ ಭಾರತದ ಯುವಜನತೆ ಸ್ವಂತ ಉದ್ಯಮದತ್ತ ಒಲವು ತೋರುತ್ತಿದ್ದಾರೆ. ಸ್ಕಿಲ್ ಇಂಡಿಯಾ ಅಭಿಯಾನ ದೇಶದ ಎಲ್ಲಾ ಯುವಕರಿಗೆ ಕೌಶಲ್ಯವನ್ನು ತರಬೇತಿ ನೀಡುವ ಮೂಲಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದಾಗಿದ್ದು, ನವೋದ್ಯಮಿಗಳಿಗೆ ಬೆಂಬಲ, ಉದ್ಯಮ ಪ್ರಾರಂಭಿಸಲು ಸೂಕ್ತ ಮೂಲಸೌಕರ್ಯ ಕಲ್ಪಿಸುವ ಜೊತೆಗೆ ಭಾರತದಲ್ಲಿ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುವುದು, ಸ್ಟಾರ್ಟ್ ಆಪ್ ಇಂಡಿಯಾ ಯೋಜನೆಯ ಮೂಲ ಉದ್ದೇಶವಾಗಿದೆ, ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನ, ಮಾತನಾಡುವ ಶೈಲಿ ಹಾಗೂ ನಮ್ಮೊಳಗಿನ ವೃತ್ತಿ ಕೌಶಲ್ಯವನ್ನು ಅಭಿವೃದ್ಧಿ ಪಡಿಸಿಕೊಂಡು ಸ್ಟಾರ್ಟ್ಅಪ್ ಇಂಡಿಯಾ ಯೋಜನೆಯ ಸದುಪಯೋಗ ಪಡಿಸಿಕೊಂಡು ಉತ್ತಮ ಉದ್ಯೋಗಿಗಗಳಾಗಿ ಎಂದರು.
ಸಂಘದ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಧ್ಯಕ್ಷ ಗುರುಬಸವ ಸೂಳಿಭಾವಿ ಮಾತನಾಡಿ, ಆಧುನಿಕತೆಯ ಸ್ಪರ್ದಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸೃಜನಶೀಲತೆಯನ್ನು ಬೆಳೆಸಿಕೊಳ್ಳಬೇಕು, ಜೊತೆಗೆ ತಂದೆ ತಾಯಿ, ಗುರು ಮತ್ತು ಸಮಾಜ ನೀಡಿದ ಮಾರ್ಗದರ್ಶನ ಜೀವನ ಸಿದ್ದಾಂತಗಳನ್ನು ಮರೆಯದೆ ಈ ಮಣ್ಣಿನ ಋಣ ತಿರಿಸುವ ಕೆಲಸವಾಗಲಿ ಎಂದರು.
ಬ.ವಿ.ವಿ ಸಂಘದ ಕಾಲೇಜುಗಳ ಪದನಿಮಿತ್ತ ಕಾರ್ಯದರ್ಶಿಗಳಾದ ಡಾ. ಎಸ್ ಎಂ ಗಾಂವಕರ ಹಾಗೂ ಮಹಾವಿದ್ಯಾಲಯದ ಪ್ರಾಚಾರ್ಯ ಜಗನ್ನಾಥ ವ್ಹಿ. ಚವ್ಹಾಣ, ಐಕ್ಯೂಎಸಿ ಸಂಯೋಜಕರಾದ ಗೀರಿಜಾ ನಾವದಗಿ, ಬಿಬಿಎ ವಿಭಾಗದ ಸಂಯೋಜಕ ಡಾ.ಎಂ.ನಂಜುಂಡಸ್ವಾಮಿ, ವಿದ್ಯಾರ್ಥಿಗಳ ಪ್ರತಿನಿಧಿ ಪರೇಶ ವೇದಿಕೆ ಮೇಲೆ ಇದ್ದರು. ಬಿಬಿಎ ವಿಭಾಗದ ಮುಖ್ಯಸ್ಥೆ ನಂದಿನಿ ದೊಡ್ಡಮನಿ ಪ್ರಸ್ತಾವಿಕ ಮಾತನಾಡಿದರು, ಶೀತಲ್ ಬಾರ್ಷಿ ಪರಿಚಯಿಸಿದರು, ವಿದ್ಯಾರ್ಥಿನಿಯರಾದ ರೀತಿಕಾ,ಅಪೂರ್ವ ಕಾರ್ಯಕ್ರಮ ನಿರೂಪಿಸಿದರು, ಗುರಮ್ಮ ಬಳಿಗಾರ ವಂದಿಸಿದರು.