ಮಾಂಜರಿ: ಸಂಕೇಶ್ವರ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ 2.40 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ಹೈಟೆಕ್ ಬಸ್ ನಿಲ್ದಾಣ ಉದ್ಘಾಟನೆಗಾಗಿ ಕಾಯುತ್ತಿದೆ.
ವಿಜಯಪುರ, ಅಥಣಿ, ರಾಯಬಾಗ, ಚಿಕ್ಕೋಡಿ ಹಾಗೂ ಮಹಾರಾಷ್ಟ್ರದ ಸಾಂಗ್ಲಿ, ಜಯಸಿಂಗಪುರ ಮೊದಲಾದ ನಗರಗಳಿಂದ ಅಂಕಲಿ ನಿಲ್ದಾಣಕ್ಕೆ ಬಸ್‌ಗಳು ಆಗಮಿಸುತ್ತವೆ. ಇಲ್ಲಿ ನಿತ್ಯವೂ ರಾಜ್ಯ ರಸ್ತೆ ಸಾರಿಗೆಯ ನೂರಾರು ಬಸ್ ಸಂಚರಿಸುತ್ತವೆ. ಆದರೆ, ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಗೊಂಡಿದ್ದರೂ ಲೋಕಾರ್ಪಣೆ ಮಾಡದಿರುವುದರಿಂದ ಬಸ್‌ಗಳು ರಸ್ತೆ ಮಧ್ಯೆದಲ್ಲಿಯೇ ನಿಂತು ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು ಮತ್ತು ಇಳಿಸುವುದು ಮಾಡುತ್ತಿವೆ. ಇದರಿಂದ ಇಕ್ಕಟ್ಟಾದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ.
ಅಂಕಲಿಯಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ 2.40 ಕೋಟಿ ರೂ.ಮಂಜೂರಾಗಿ ಸುಸಜ್ಜಿತ ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಂಡಿದೆ. ವಿಧಾನಸಭೆ ಸಾರ್ವತ್ರಿಕ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಬಸ್ ನಿಲ್ದಾಣದ ಉದ್ಘಾಟನೆ ವಿಳಂಬವಾಗಿದ್ದು, ಸರ್ಕಾರ ಬೇಗ ನಿಲ್ದಾಣ ಲೋಕಾರ್ಪಣೆ ಮಾಡುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕಿದೆ.
ಬಸ್‌ಗಳು ರಸ್ತೆ ಮಧ್ಯೆಯೇ ನಿಲ್ಲುತ್ತಿದ್ದು, ಇದರಿಂದ ನಿತ್ಯವೂ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಅಲ್ಲದೆ, ಶಾಲೆ, ಕಾಲೇಜು ಆರಂಭವಾಗಿದ್ದರಿಂದ ಸಾವಿರಾರು ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ರಸ್ತೆ ಬದಿಯಲ್ಲಿ ನಿಂತುಕೊಂಡು ಬಸ್‌ಗಾಗಿ ಕಾಯುವ ಅನಿವಾರ್ಯತೆ ಎದುರಾಗಿದೆ. ಸಂಬಂಧಪಟ್ಟ ಅಕಾರಿಗಳು ಮತ್ತು ಜನಪ್ರತಿನಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಬಸ್ ನಿಲ್ದಾಣ ಉದ್ಘಾಟನೆ ವಿಳಂಬವಾಗಿದೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದು, ಶೀಘ್ರ ಉದ್ಘಾಟನೆ ಮಾಡಿ ಅನುಕೂಲ ಕಲ್ಪಿಸಬೇಕು. ಸುರೇಶ ಪಾಟೀಲ ಅಂಕಲಿ ಗ್ರಾಪಂ ಸದಸ್ಯಸುರೇಶ ಪಾಟೀಲ ಅಂಕಲಿ ಗ್ರಾಪಂ ಸದಸ್ಯ
ಚಿಕ್ಕೋಡಿ ವಿಭಾಗೀಯ ವ್ಯಾಪ್ತಿಯ ಕಲ್ಲೋಳ ಮತ್ತು ಅಂಕಲಿ ಗ್ರಾಮಗಳಲ್ಲಿ ನಿರ್ಮಿತ ಬಸ್ ನಿಲ್ದಾಣ ಉದ್ಘಾಟನೆ ಕುರಿತು ಸಂಬಂಧಪಟ್ಟ ಶಾಸಕರ ಗಮನಕ್ಕೆ ತರಲಾಗಿದೆ. ಆದಷ್ಟು ಬೇಗ ಎರಡೂ ಬಸ್ ನಿಲ್ದಾಣ ಉದ್ಘಾಟಿಸಲಾಗುವುದು. ಶ್ರೀ ನಾಯಕ್ ವಾಕರಸಾಸಂ. ಚಿಕ್ಕೋಡಿ ವಿಭಾಗೀಯ ಎಇಇಶ್ರೀ ನಾಯಕ್ ವಾಕರಸಾಸಂ. ಚಿಕ್ಕೋಡಿ ವಿಭಾಗೀಯ ಎಇಇ