ಜಿಲ್ಲೆ

ಉದ್ಘಾಟನೆಗೆ ಕರೆಯದಿದ್ದಕ್ಕೆ ಪಂಚಾಯಿತಿಗೆ ಮುತ್ತಿಗೆ

ಕಬ್ಬೂರ: ಪಟ್ಟಣ ಪಂಚಾಯಿತಿ ಕಾಮಗಾರಿ ಸ್ಥಳೀಯ ಪಂಚಾಯಿತಿ ಅನುದಾನದಲ್ಲಿ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಅಽಕಾರಿಗಳು ಸ್ಥಳೀಯ ಮುಖಂಡರಿಗೆ ಆಹ್ವಾನಿಸಿಲ್ಲ ಎಂದು ಆರೋಪಿಸಿ ಗುರುವಾರ ಸಾರ್ವಜನಿಕರು ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಮುಖಂಡ ಅಂಬಾಪ್ರಸಾದ ನರೋಟಿ ಮಾತನಾಡಿ, ಅಧಿಕಾರಿಗಳು ಪ್ರೋಟೋಕಾಲ್ ಉಲ್ಲಂಘನೆ ಮಾಡಿ ಪಂಚಾಯಿತಿ ಕಟ್ಟಡ ಉದ್ಘಾಟನೆ ಮಾಡಿಸಿದ್ದಾರೆ. ತಮಗೆ ತಿಳಿದಂತೆ ಅಧಿಕಾರ ನಡೆಸುತ್ತಿದ್ದಾರೆ. ಪಂಚಾಯಿತಿ ಕಟ್ಟಡ ಹಾಗೂ ಬಸ್ ನಿಲ್ದಾಣ ಪಂಚಾಯಿತಿಯ ಎಸ್‌ಎಫ್‌ಸಿ ಹಾಗೂ ೧೫ನೇ ಹಣಕಾಸು ಅನುದಾನದಲ್ಲಿ ಪೂರ್ಣಗೊಂಡಿದ್ದು, ಅವುಗಳ ಉದ್ಘಾಟನೆಗೆ ಸ್ಥಳೀಯ ಮುಖಂಡರಿಗೆ ತಿಳಿಸದೆ ಅಽಕಾರಿಗಳು ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದು, ಶಿಸ್ತುಕ್ರಮ ಜರುಗಿಸುವಂತೆ ಆಗ್ರಹಿಸಿದರು.

ಸ್ಥಳಕ್ಕೆ ಆಗಮಿಸಿ ಚಿಕ್ಕೋಡಿ ತಹಸೀಲ್ದಾರ್ ಸಿ.ಎಸ್.ಕುಲಕರ್ಣಿ ಸಾರ್ವಜನಿಕರಿಂದ ಮನವಿ ಸ್ವೀಕರಿಸಿದರು. ನಂತರ ಅವರು ಮಾತನಾಡಿ, ತಕ್ಷಣ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುತ್ತೇನೆ. ಅಲ್ಲದೆ ಪ್ರತಿ ವಾರಕ್ಕೊಮ್ಮೆ ಸಾರ್ವಜನಿಕರ ಕುಂದು-ಕೊರತೆ ಆಲಿಸುತ್ತೇನೆ ಎಂದು ತಿಳಿಸಿದರು.

ಮುಖಂಡರಾದ ಅಮೀರ್ ಮುಲ್ತಾನಿ, ಸುರೇಶ ಭಗವತಿ, ಹಾಲಪ್ಪ ಹೊಸೂರ, ಮಹದೇವ ದೇಸಾಯಿ, ಸಂಜು ಹಿರೇಕುರಬರ, ಸಿದ್ದಪ್ಪ ಘೀವಾರೆ, ಸುಧೀರ ತೋರನಹಳ್ಳಿ, ಸಿದ್ರಾಮ ನಾಯಕ, ರಾಮಪ್ಪ ಪೂಜಾರಿ, ನಾಗಪ್ಪ ಬಾಡದ, ಶಂಕರ ದಳವಾಯಿ, ಭೂತಪ್ಪ ಹಿರೇಕುರಬರ, ಭೀಮಪ್ಪ ಬೆಳಗಲಿ, ಈರಪ್ಪ ನಾಯಿಕ, ಗಂಗಪ್ಪ ಬಾನಿ ಇತರರಿದ್ದರು.