filter: 0; fileterIntensity: 0.000000; filterMask: 0; captureOrientation: 0; hdrForward: 5; shaking: 0.000000; highlight: 1; algolist: 0; multi-frame: 1; brp_mask: 8; brp_del_th: 0.0000,0.0000; brp_del_sen: 0.0000,0.0000; module: photo;hw-remosaic: false;touch: (0.33027795, 0.5556665);sceneMode: 8388608;cct_value: 0;AI_Scene: (2, 0);aec_lux: 86.52086;aec_lux_index: 0;albedo: ;confidence: ;motionLevel: 0;weatherinfo: null;temperature: 38; 
ಜಿಲ್ಲೆ

ಉದ್ಘಾಟನೆಗೂ ಮುನ್ನ ಕುಸಿದ ಕೆರೆ ತಡೆಗೋಡೆ

ಕುರುಗೋಡು: ಕುಲ್ಲುಕಂಬ, ಕೆರೆಕೆರೆ, ಲಕ್ಷ್ಮೀಪುರ ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವ ಕೆರೆಯ ತಡೆಗೋಡೆ ಉದ್ಘಾಟನೆಗೂ ಮುನ್ನ ಕುಸಿದಿದೆ.

ಜೆಜೆಎಂ ಯೋಜನೆಯಡಿ 2023ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ಹಾಗೂ ರಾಜ್ಯದ ತಲಾ 1.96 ಕೋಟಿ ರೂ., ಸಮುದಾಯದ ವಂತಿಕೆ 20.70 ಲಕ್ಷ ರೂ ಮತ್ತು ಇತರ ಅನುದಾನ ಸೇರಿ ಒಟ್ಟು 4.14 ಕೋಟಿ ರೂ. ವೆಚ್ಚದಲ್ಲಿ ಕೆರೆಯ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿತ್ತು. ಒಂದೂವರೆ ವರ್ಷದ ಹಿಂದೆ ಕಾಮಗಾರಿ ಪೂರ್ಣಗೊಂಡಿತ್ತು. ಆದರೆ, ಇನ್ನೂ ಗ್ರಾಪಂಗೆ ಹಸ್ತಾಂತರವಾಗಿರಲಿಲ್ಲ. ಇತ್ತೀಚಿಗೆ ಸುರಿದ ಮಳೆಯಿಂದಾಗಿ ತಡೆಗೋಡೆ ಕುಸಿದು ಕೆರೆಯ ಒಡಲು ಸೇರಿದೆ.

ಕಲ್ಲುಕಂಬ, ಕೆರೆಕೆರೆ ಗ್ರಾಮಕ್ಕೆ ಆಗೊಮ್ಮೆ, ಈಗೊಮ್ಮೆ ನೀರು ಸರಬರಾಜು ಆಗುತ್ತದೆ. ಆದರೆ, ಈವರೆಗೆ ಲಕ್ಷ್ಮೀಪುರ ಗ್ರಾಮಕ್ಕೆ ಕೆರೆಯ ನೀರು ತಲುಪುತ್ತಿಲ್ಲ. ಪಂಪ್ ಮತ್ತು ಪೈಪ್‌ಲೈನ್‌ನಲ್ಲಿ ದೋಷ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ.