ಶೃಂಗೇರಿಯಲ್ಲಿ ಇನ್ನರ್‌ವ್ಹೀಲ್ ಪದಗ್ರಹಣ ಸಮಾರಂಭದಲ್ಲಿ ಲೇಖಕಿ ದೀಪಾ ಹಿರೇಗುತ್ತಿ ಮಾತನಾಡಿದರು. ಅಭಿನಂದನ್ ಶೆಟ್ಟಿ, ರಾಜಗೋಪಾಲ್ ಜೋಯಿಸ್, ಕೆ.ಸಿ.ನಾಗೇಶ್, ಸುರೇಶ್ ಇತರರಿದ್ದರು. 
ಜಿಲ್ಲೆ

ಉದಾತ್ತ ಭಾವನೆಯಿಂದ ಸಂಸ್ಥೆ ಉನ್ನತಿ

ಎಸ್.ಎನ್.ರವೀಂದ್ರ

ಶೃಂಗೇರಿ: ನಾವೆಲ್ಲರೂ ಒಂದೇ ಎಂಬುದು ಸಂಸ್ಥೆಗಳ ಮೂಲತತ್ವ. ವಿಶ್ವಪ್ರೇಮ ಎಂಬುದು ಋಗ್ವೇದ ಕಾಲದಲ್ಲಿ ಉಲ್ಲೇಖವಿದ್ದು ಉದಾತ್ತ ಮನೋಭಾವ ಇದ್ದರೆ ಮಾತ್ರ ಸಂಸ್ಥೆಯ ಉನ್ನತೀಕರಣ ಸಾಧ್ಯ ಎಂದು ಲೇಖಕಿ ದೀಪಾ ಹಿರೇಗುತ್ತಿ ತಿಳಿಸಿದರು.

ಭಾನುವಾರ ಇನ್ನರ್‌ವ್ಹೀಲ್ ಸಂಸ್ಥೆ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ನಮ್ಮಲ್ಲಿ ದುರಾಭಿಮಾನ ಇರಬಾರದು. ಸ್ವಾಭಿಮಾನ ಇರಬೇಕು. ಸೇವೆ ಎಂಬುದು ಶತಮಾನಗಳಿಂದ ಬಂದಂತಹ ಉನ್ನತ ಮೌಲ್ಯ. ಪರೋಪಕಾರ ಮಾಡುವುದು ನಿಜವಾದ ಧರ್ಮ. ನಾವು ಸೇವೆ ಮಾಡುವ ಮುಖಾಂತರ ಸಮಾಜದ ಋಣ ತೀರಿಸಬೇಕು. ಪ್ರಕೃತಿಗೆ ನಾವು ಋಣಿಯಾಗಿರಬೇಕು. ಕಟ್ಟಕಡೆಯ ಜನರಿಗೆ ಸಹಕಾರ ನೀಡುವುದೇ ಸಂಸ್ಥೆಯ ಪರಮ ಧ್ಯೇಯವಾಗಬೇಕು ಎಂದರು.

ನೂತನ ಅಧ್ಯಕ್ಷೆ ಮಂಜುಳಾ ಸುಬ್ರಹ್ಮಣ್ಯ ಮಾತನಾಡಿ, ಆರೋಗ್ಯ, ಶಿಕ್ಷಣ, ಪರಿಸರ, ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿ ಸೇವಾ ಕಾರ್ಯ ನಡೆಸಲಾಗುವುದು ಎಂದರು.

ಶಾಸಕ ಟಿ.ಡಿ.ರಾಜೇಗೌಡ, ಕಾರ್ಯದರ್ಶಿ ರತ್ನಾ ನಾಗೇಶ್, ಚರಿತಾ, ಭೂಮಿಕಾ, ಸುಬ್ರಹ್ಮಣ್ಯ ಅಂಬಲಮನೆ, ಪ್ರಿಯದರ್ಶಿನಿ, ಡಿ.ಮಹೇಶ್ ಇದ್ದರು.