ಚಿಕ್ಕಮಗಳೂರು: ರಾಷ್ಟಿçÃಯತೆಗೆ ಉದಾತ್ತ ಕೊಡುಗೆ ನೀಡಿರುವ ಸ್ವಾಮಿವಿವೇಕಾನಂದರು ಯುವಶಕ್ತಿಯ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು ಎಂದು ಸಾಹಿತಿ ಚಟ್ನಳ್ಳಿ ಮಹೇಶ್ ತಿಳಿಸಿದರು.
ನಗರದ ಕುವೆಂಪು ನಗರದ ಕೆ.ಜೆ.ನಂಜುAಡಪ್ಪ ಅವರ ಮನೆಯಂಗಳದಲ್ಲಿ ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಹಾಗೂ ಐಸಿರಿ ಫೌಂಡೇಶನ್ ಸಹಯೋಗದೊಂದಿಗೆ ಆಯೋಜಿಸಿರುವ ಅಂಗಳದೆಡೆಗೆ ಮಂಗಳ ನುಡಿ-ನಡಿಗೆ ಶ್ರಾವಣಮಾಸದ ಪ್ರವಚನ ಮಾಲಿಕೆಯ ಅಂಗವಾಗಿ ದಿಟ್ಟ ನುಡಿಯ ವೀರ ಸ್ವಾಮಿವಿವೇಕಾನಂದ ವಿಷಯದ ಕುರಿತು ಉಪನ್ಯಾಸ ನೀಡಿದರು.
ಕಾವಿಧಾರಿಯಾಗಿ ದೇಶಪರ್ಯಟನೆ ಮಾಡಿ ನಿಜವಾದ ಸಮಸ್ಯೆಯನ್ನು ಅರ್ಥಮಾಡಿಕೊಂಡು ಅದರ ಪರಿಹಾರಕ್ಕೆ ತಮ್ಮದೇ ಸೂತ್ರವನ್ನು ನೀಡಿದ ಸ್ವಾಮಿ ವಿವೇಕಾನಂದರು ದೀನ-ದಲಿತ-ಪಾಪಿ-ರೋಗಿ-ದರಿದ್ರ ದೇವೋಭವ ಎಂದು ಸಾರಿದ ಪುಣ್ಯಾತ್ಮ. ವೀರವಾಣಿ ಸಿಂಹಘರ್ಜನೆಗೆ ಮತ್ತೊಂದು ಹೆಸರು. ಧ್ಯಾನದ ಮೂಲಕ ಆತ್ಮಬಲ ಉದ್ದೀಪನಕ್ಕೆ ತೊಡಗಿದವರನ್ನು ರಾಮಕೃಷ್ಣ ಪರಮಹಂಸರು ಜನಸಾಮಾನ್ಯರತ್ತ ಮುಖಮಾಡುವಂತೆ ಪ್ರೇರಣೆ ನೀಡಿದ್ದರು ಎಂದರು.
ರಾಷ್ಟçದ ಘನತೆ, ಭವ್ಯತೆ, ದಿವ್ಯತೆ ನಿಂತಿರುವುದು ಭೌತಿಕ ಬೆಳವಣಿಗೆ ಮೇಲಲ್ಲ. ಬದಲಿಗೆ ಈ ನೆಲದ ಸಾಧು -ಸಂತರ-ಋಷಿಮುನಿಗಳ ಆಧ್ಯಾತ್ಮಿಕ ತಪಶಕ್ತಿಯ ಮೇಲೆ ಎಂದು ಜಗತ್ತಿಗೆ ತೋರಿಸಿ ಕೊಟ್ಟರು. ಸಾತ್ವಿಕ ಧನಾತ್ಮಕ ಗುಣಗಳಿಂದ ಬೆಳೆದು ಹಿಂದೂಧರ್ಮ ಸನಾತನತೆಯನ್ನು ಪ್ರಪಂಚಕ್ಕೆ ಸಮರ್ಥವಾಗಿ ಪರಿಚಯಿಸಿದ ಧೀರ ಸನ್ಯಾಸಿ ಎಂದು ಬಣ್ಣಿಸಿದರು.
ಉತ್ತರಾಯಣ ಪುಣ್ಯಸಂಧಿಕಾಲ ಸೂರ್ಯ ದಿಕ್ಕುಬದಲಿಸುವ ಜನವರಿ-೧೪ರ ಸಂಕ್ರಮಣ ಸಂದರ್ಭದಲ್ಲಿ ಬಂಗಾಳದ ವಿಶ್ವನಾಥದತ್ತ ಮತ್ತು ಭುವನೇಶ್ವರಿ ಎರಡು ಪರಮತತ್ವಗಳಿಗೆ ಹುಟ್ಟಿದ ಪರಮೋಚ್ಛ ತತ್ವವೇ ನರೇಂದ್ರ. ಬಾಲ್ಯದಲ್ಲೆ ಆಧ್ಯಾತ್ಮದ ಒಲವು-ನಿಲವು ಹೊಂದಿದ ಬಾಲಕ ಟಾಂಗಾವಾಲ ಆಗುವ ಆಶಯ ವ್ಯಕ್ತಪಡಿಸಿದಾಗ ತಂದೆ ವಿಶ್ವನಾಥದತ್ತರು ಆರು ಕುದುರೆಗಳ ರಥವನ್ನು ಓಡಿಸುವ ಕೃಷ್ಣನನ್ನು ತೋರಿಸಿ ಇಂತಹ ಸಾರಥಿಯಾಗು ಎಂದು ಹೇಳಿದ್ದರು. ಅದರಂತೆ ಮುಂದೆ ವಿವೇಕಾನಂದರಾಗಿ ಸನಾತನತೆಯ ಸಾರಥಿಯಾದರು ಎಂದು ಬಣ್ಣಿಸಿದರು.
ಕ್ರೆÊಸ್ತರ ನೆಲದಲ್ಲಿ ನಿಂತು ಹಿಂದೂಧರ್ಮದ ನಿಜ ಗರಿಮೆಯನ್ನು ಧೈರ್ಯವಾಗಿ ಅನಾವರಣಗೊಳಿಸಿದರು. ಚಿಕಾಗೋ ವಿಶ್ವಧರ್ಮಸಮ್ಮೇಳನದಲ್ಲಿ ಸಹೋದರ-ಸಹೋದರಿಯರೆಂಬ ನಿಜ ಭ್ರಾತೃತ್ವದ ಪ್ರೀತಿಯ ಮಾತುಗಳಿಂದ ಗಮನಸೆಳದು ಕೇವಲ ಮೂರುಮುಕ್ಕಾಲು ನಿಮಿಷಗಳ ಭಾಷಣದೊಂದಿಗೆ ಜಗತ್ತಿನ ಧಾರ್ಮಿಕ ಪ್ರಪಂಚದ ಛಾಯಂಪಿಯನ್ ಆಗಿ ವಿವೇಕಾನಂದ ಹೊರಹೊಮ್ಮಿದರು ಎಂದರು.
ವಿವೇಕ ಜಾಗೃತ ಬಳಗದ ಗೌರವಾಧ್ಯಕ್ಷ ನಂಜುAಡಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿವೇಕ, ರಾಮಕೃಷ್ಣಪರಮಹಂಸರು, ಶಾರದಾದೇವಿ ತ್ರಿಮೂರ್ತಿಗಳು ಭಾರತದ ಅಷ್ಟೇ ಅಲ್ಲ ಜಗತ್ತಿನ ಆಧ್ಯಾತ್ಮಿಕ ನಾಯಕರಾಗಿ ಮನುಕುಲದ ಕಲ್ಯಾಣಕ್ಕೆ ಕಾರಣೀಭೂರಾಗಿದ್ದಾರೆ ಎಂದು ಹೇಳಿದರು.
ನಗರಸಭೆ ಮಾಜಿ ಉಪಾಧ್ಯಕ್ಷೆ ಲಕ್ಷö್ಮಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭುಲಿಂಗ ಶಾಸ್ತಿç, ಐಸಿರಿ ಫೌಂಡೇಶನ ಅಧ್ಯಕ್ಷ ರೋಹನ ಭಾರ್ಗವಪುರಿ, ಅಭಾಸಾಪದ ಪ್ರಶಾಂತ ಹೊಳೆಹೊನ್ನೂರು, ಪ್ರೊ.ನಾಗೇಶ್ ಕಡೂರ್, ವಿನಾಯಕ, ಭುವನೇಶ್ವರಿ ಉಪಸ್ಥಿತರಿದ್ದರು.