ಗುಂಡ್ಲುಪೇಟೆ: ತಾಲೂಕಿನ ಹೆಗ್ಗಡಹಳ್ಳಿ ಗ್ರಾಮದಲ್ಲಿ ಮಹಾ ಪಾರ್ವತಿ ಅಲ್ಲಳ್ಳಿ ಮಾರಮ್ಮನವರ ಉತ್ಸವ ಮೂರ್ತಿಯ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು.
ಈ ಅಂಗವಾಗಿ ಮಂಗಳವಾರ ಸಂಜೆ ಮಂಗಳ ವಾದ್ಯಗಳು ಹಾಗೂ ಜನಪದ ಕಲಾತಂಡಗಳ ಜತೆ ಪೂರ್ಣಕುಂಬ ಹೊತ್ತ ಹೆಣ್ಣು ಮಕ್ಕಳ ಜತೆಗೆ ಅಲ್ಲಳ್ಳಿ ಮಾರಮ್ಮನವರ ಉತ್ಸವ ಮೂರ್ತಿಯನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಹರಕೆಹೊತ್ತ ಭಕ್ತರು ಬಾಯಿ ಬೀಗ ಸೇರಿದಂತೆ ನಾನಾ ಸೇವೆಗಳನ್ನು ಸಲ್ಲಿಸಿದರು. ಪ್ರತಿಯೊಂದು ಮನೆಯವರೂ ಉತ್ಸವಮೂರ್ತಿಗೆ ಪೂಜೆ ಸಲ್ಲಿಸಿ ತಮ್ಮ ಭಕ್ತಿಭಾವ ಮೆರೆದರು.
ಗ್ರಾಮದ ಯುವಕರು, ಮುಖಂಡರು, ಸುತ್ತಮುತ್ತಲ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.