ಶ್ರೀ ರಾಘವೇಂದ್ರಸ್ವಾಮಿಗಳ ಮಧ್ಯಾರಾಧನೆ ಅಂಗವಾಗಿ ಶ್ರೀ ರಾಘವೇಂದ್ರ ಮಠದಲ್ಲಿ ವಿಶೇಷ ಪೂಜೆ ನೆರವೇರಿಸಿರುವ ಅರ್ಚಕ ಬಿ.ಎನ್.ಸುಧೀಂದ್ರಾಚಾರ್.  
ಜಿಲ್ಲೆ

ಉತ್ತರಾದಿ ಮಠದಲ್ಲಿ ಗುರುರಾಯರ ಮಧ್ಯಾರಾಧನೆ

ಬೇಲೂರು: ಪಟ್ಟಣದ ಶ್ರೀ ಜಗದ್ಗುರು ಮಧ್ವಾಚಾರ್ಯ ಮೂಲ ಮಹಾಸಂಸ್ಥಾನದ ಉತ್ತರಾದಿ ಮಠದಲ್ಲಿ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಶನಿವಾರ 352ನೇ ಮಧ್ಯಾರಾಧನೆ ಮಹೋತ್ಸವವು ನೂರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು. ಭಕ್ತರು ಭಜನೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಶ್ರೀ ರಾಘವೇಂದ್ರಸ್ವಾಮಿಗಳ ಮಧ್ಯಾರಾಧನೆ ಅಂಗವಾಗಿ ಪಟ್ಟಣದ ರಾಘವೇಂದ್ರಸ್ವಾಮಿ ಮಠದಲ್ಲಿ ವಿಶೇಷ ಪೂಜೆ, ಪೂರ್ವಾರಾಧನೆ, ಮಧ್ಯಾರಾಧನೆ, ಉತ್ತರಾಧನೆ, ಸುಪ್ರಭಾತ, ನಿರ್ಮಾಲ್ಯ, ಫಲಾಮೃತಾಭಿಷೇಕ, ಪುಷ್ಪಾಲಂಕಾರ, ಪಂಡಿತರಿಂದ ಪ್ರವಚನ, ನೈವೇದ್ಯ, ಹಸ್ತೋದಕ, ಮಹಾ ಮಂಗಳಾರತಿ, ಭಜನೆ, ಭಕ್ತಿಗೀತೆ, ರಥೋತ್ಸವ, ಸ್ವಸ್ತಿ ವಾಚಕ, ಡೋಲೋತ್ಸವ ನೆರವೇರಿಸಿದ ನಂತರ ಶ್ರೀ ಪ್ರಹ್ಲಾದರಾಯರ ಉತ್ಸವನ್ನು ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.

ಮೂರು ದಿನದ ಕಾರ್ಯಕ್ರಮದಲ್ಲಿ ಮದ್ವಪತಿವಿಠಲ ಭಜನಾ ಮಂಡಳಿಯಿಂದ ಭಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ, ಚನ್ನಕೇಶವ ಸಂಗೀತ ಸಭಾದಿಂದ ಸ್ಯಾಕ್ಸೋಫೋನ್ ವಾದನ ನಡೆಸಲಾಯಿತು. ಗುರುರಾಯರ ದರ್ಶನಕ್ಕೆ ಆಗಮಿಸಿದ ನೂರಾರು ಭಕ್ತರಿಗೆ ಯತಿರಾಜ ಮಠದ ವೈಷ್ಣವ ಗೋಷ್ಠಿಯೊಂದಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.