ಕಾರವಾರ: ಈದ್ -ಉಲ್-ಅಧಾ (ಬಕ್ರಿದ್)ಹಬ್ಬವನ್ನು ಜಿಲ್ಲೆಯ ವಿವಿಧೆಡೆ ಶನಿವಾರ ಸಂಭ್ರಮದಿಂದ ಆಚರಿಸಲಾಯಿತು. ಮಸೀದಿಗಳಲ್ಲಿ ಬೆಳಗ್ಗೆ ಸೀಮಿತ ಸದಸ್ಯರು ಪ್ರಾರ್ಥನೆ ನೆರವೇರಿಸಿದರು. ಕೆಲವು ಮಸೀದಿಗಳಲ್ಲಿ ಎರಡು, ಮೂರು ಬ್ಯಾಚ್ನಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಕಾರವಾರದ ಕೋಡಿಬಾಗದ ಮಸ್ಜಿದ್ ಎ ಫುರ್ಖಾನ್ದಲ್ಲಿ ಮೌಲಾನಾ ವಾಜಿದ್ ಶೇಖ್ ಅವರು ನಮಾಜ್ ನೆರವೇರಿಸಿದರು.
ಹಳಿಯಾಳ ತಾಲೂಕಿನಾದ್ಯಂತ ಮುಸ್ಲಿಮರು ಈದ್- ಉಲ್-ಅಧಾವನ್ನು ಭಕ್ತಿಯಿಂದ ಆಚರಿಸಿದರು. ಮಸೀದಿಗಳಲ್ಲಿ ಮಾಸ್ಕ್ ಧರಿಸಿ, ಪರಸ್ಪರ ಅಂತರ ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸಲಾಯಿತು. ಅಂಜುಮನ್ ಸಂಸ್ಥೆ ಅಧ್ಯಕ್ಷ ಅಲಿಂ ಬಸರಿಕಟ್ಟಿ, ಜಿಲ್ಲಾ ವಕ್ಪ್ ಮಂಡಳಿ ಅಧ್ಯಕ್ಷ ಮಹಮದ್ಖಯ್ಯಾಂ ಮುಗದ, ಅಜರ್ ಬಸರಿಕಟ್ಟಿ, ಫಯಾಜ್ ಶೇಖ್, ಇಮ್ತಿಯಾಜ್ ಶೇಖ್, ಸುಭಾನಿ ಘೊರಿಖಾನ್, ಇಮ್ತಿಯಾಜ್ ಮನಿಯಾರ, ಇಜಾಜ್ ಮುಗದ, ರಿಜ್ವಾನ್ ಕಿಲ್ಲೇದಾರ, ಅಬ್ದುಲ್ಸಲೆಂ ದಲಾಲ, ನಸ್ರುಲ್ಲಾ ಖಾನ್, ಫಾರುಖ್ ಬಾಳೆಕುಂದ್ರಿ, ರಹಿಸ್ ಕೋಠೂರ, ಅಜರ್ ಹಲಸಿ, ಎಂ.ಎ. ಕಾಗದ, ಎ.ಪಿ. ಮುಜಾವರ, ಅರೀಫ್ ಹಲಸಿ, ಸುಭಾನಿ ಹುಬ್ಬಳ್ಳಿ, ಖಾಕೇಶಾ ಮಕಾನದಾರ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು. ಮುಸ್ಲಿಂ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ತೇರಗಾಂವ, ಜೋಗನಕೊಪ್ಪ, ಬೆಳವಟಗಿ, ಕಾವಲವಾಡ, ಬಾಗವತಿ, ತಟ್ಟಿಗೇರಾ, ಅಡಕೆ ಹೊಸುರ ಗ್ರಾಮಗಳಲ್ಲಿಯೂ ಕೋವಿಡ್ ಸುರಕ್ಷತಾ ನಿಯಮ ಪಾಲಿಸಿ ಬಕ್ರೀದ್ ಆಚರಿಸಲಾಯಿತು.
ಸಿದ್ದಾಪುರ ಪಟ್ಟಣ ಹಾಗೂ ಹೇರೂರು, ಹೆಗ್ಗರಣಿ, ನಿಲ್ಕುಂದ, ಹಾರ್ಸಿಕಟ್ಟಾ, ನೆಜ್ಜೂರು, ಹೊಸಳ್ಳಿ,ಬಿಳಗಿ, ಬೇಡ್ಕಣಿ ಮತ್ತಿತರ ಗ್ರಾಮೀಣ ಭಾಗದ ಮುಸ್ಲಿಂ ಸಮಾಜದವರು ತಮ್ಮ ಊರಿನ ಮಸೀದಿಗಳಲ್ಲಿ ಪರಸ್ಪರ ಅಂತರ ಕಾಯ್ದುಕೊಂಡು ಹಾಗೂ ಮಾಸ್ಕ್ ಧರಿಸಿ ಬಕ್ರೀದ್ ಹಬ್ಬದ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕೆಲವರು ಮನೆಯಲ್ಲಿಯೇ ನಮಾಜ್ ಮಾಡಿದರು.
ಪಟ್ಟಣದ ಬದ್ರಿಯಾ ಜಾಮೀಯಾ ಮಸೀದಿಯಲ್ಲಿ ಮೌಲಾನಾ ಮೆಹಮೂದ್ ರಝಾ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಖಾದರ್ ಭಾಷಾ, ಬಿ.ಎ. ಸಾಬ್, ಅಮ್ಜದ್ ಹುಸೇನಸಾಬ್, ರಿಯಾಜ್ ಹೊಸೂರು, ಇಕ್ಬಾಲ್ ಸತ್ತಾರ್ಸಾಬ್, ತಬ್ರೇಜ್ ಖಾನ್, ಇಸ್ಮಾಯಿಲ್ ಖಾನ್, ಇಲಿಯಾಸ ಇಬ್ರಾಹಿಂ ಸಾಬ್ ಇತರರು ಪಾಲ್ಗೊಂಡಿದ್ದರು.
ದಾಂಡೇಲಿ ನಗರದ 16 ಮಸೀದಿಗಳಲ್ಲಿ ಮುಸ್ಲಿಂ ಸಮಾಜದವರು ಶನಿವಾರ ಪ್ರಾರ್ಥನೆ ಸಲ್ಲಿಸಿದರು. ಕೋವಿಡ್ ನಿಯಮಾವಳಿಗಳನ್ನು ಪಾಲಿಸಿ, ಶಾಂತಿಯುತವಾಗಿ ಹಬ್ಬ ಆಚರಿಸಲಾಯಿತು. ಸ್ಥಳೀಯ ಪೊಲೀಸ್ ಇಲಾಖೆಯಿಂದ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು.