ಬಾಗಲಕೋಟೆ: ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ದೊರೆಯುವ ಸೌಲಭ್ಯ, ತಂತ್ರಜ್ಞಾನ ಅಳವಡಿಸಿಕೊಂಡಿರಿರುವ ಬಸವೇಶ್ವರ ಸಹಕಾರಿ ಬ್ಯಾಂಕ್ ಗ್ರಾಹಕರ ಹಿತಕಾಯುತ್ತಾ ಬಂದಿದೆ. ಉತ್ತರ ಕರ್ನಾಟಕ ವಿಶ್ವಾಸಾರ್ಹ ಬ್ಯಾಂಕ್ ಆಗಿ ಹೊರ ಹೊಮ್ಮಿದೆ ಎಂದು ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹೇಳಿದರು.
ನವನಗರದ ಬಸವೇಶ್ವರ ಸಹಕಾರಿ ಬ್ಯಾಂಕಿನ ಆವರಣದಲ್ಲಿರುವ ಭಾನುವಾರ ಸಂಜೆ ಬಸವ ಕಲಾ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಬ್ಯಾಂಕಿನ ೧೦೭ನೇ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬ್ಯಾಂಕು ಆಧುನಿಕ ತಂತ್ರಜ್ಞಾನದ ಎಲ್ಲ ಸೌಲಭ್ಯಗಳನ್ನು ಅಳವಡಿಸಿಕೊಂಡಿದೆ. ಎಲ್ಲ ಶಾಖೆಗಳಿಗೂ ಕೋರ ಬ್ಯಾಂಕಿಂಗ್ ವ್ಯವಸ್ಥೆ, ಮೊಬೈಲ ಬ್ಯಾಂಕಿಂಗ್ ವ್ಯವಸ್ಥೆ, ಸದ್ಯ ಸಂಪರ್ಕ ರಹಿತ ವ್ಯವಹಾರ ಸೇವೆ ಪರಿಚಯಿಸಿದೆ. ಇಂದು ತನ್ನ ಕ್ಷೇತ್ರ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಅನೇಕ ಪ್ರಶಸ್ತಿಗಳು ಮುಡಿಗೇರಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು.
ಆರ್ಥಿಕ ಅಭಿವೃದ್ಧಿಗೆ ಸಿಮೀತವಾಗದೇ ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ, ಕಲೆ, ಕ್ರೀಡೆ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದೆ. ರಾಜ್ಯದಲ್ಲಿಯೇ ಬಸವೇಶ್ವರ ಬ್ಯಾಂಕ್ ಬಹುಮುಖಿ ಸಂಸ್ಕೃತಿಯ ಸಹಕಾರದ ದೇಗುಲ ಅಂತ ಬಣ್ಣಿಸಿದ ಅವರು, ಸಾಲ ಪಡೆದುಕೊಂಡವರು, ಠೇವಣಿದಾರರು, ಸಿಬ್ಬಂದಿ ಹಾಗೂ ನಿರ್ದೇಶಕ ಮಂಡಳಿಯ ಶ್ರಮ, ಶಕ್ತಿ ಇದಕ್ಕೆ ಕಾರಣ ಎಂದು ಹೇಳಿದರು.
ದೂರದರ್ಶನ ಕಲಾವಿದ ಸಂತೋಷ ಗದ್ದನಕೇರಿ ಸಂಗೀತ ಕಾರ್ಯಕ್ರಮ ಜರುಗಿತು. ಬ್ಯಾಂಕಿನ ನಿರ್ದೇಶಕರಾದ ಸಿ.ಟಿ.ಪಾಟೀಲ, ಎಚ್.ಎಸ್. ರಾಠೋಡ, ವಿ.ವಿ. ಶಿರಗಣ್ಣವರ, ಎಸ್.ಸಿ. ಆರಬ್ಬಿ, ವ್ಹಿ.ವ್ಹಿ. ಕಲಬುರ್ಗಿ, ಎಸ್.ಟಿ. ಬಳ್ಳಾರಿ, ಬಿ.ಎಂ. ಈಟಿ, ಎಸ್.ಎಸ್. ಕಂಕಣಮೇಲಿ, ಆರ್.ವೈ. ಪಟ್ಟಣದ, ಶಶಿಧರ ಜಿಗಳೂರ, ಎಸ್.ಎಸ್. ಗೋಡಿ, ಎನ್.ಎಫ್. ಪಲ್ಲೇದ, ಎಸ್.ಎಸ್. ಜಂಗಿ, ಜೆ.ಸಿ.ಅಬ್ದುಲಪುರ, ಯು.ಎಸ್. ಜಿಗಜಿನ್ನಿ, ಎನ್.ಆರ್. ಕುಲಕರ್ಣಿ, ಬಿ.ಎಸ್. ಹಿರೇಗೌಡರ ಉಪಸ್ಥಿತರಿದ್ದರು. ಅಽಕಾರಿಗಳಾದ ವಿವೇಕಾನಂದ ಕೇಮಾಳಿ, ಬಿ.ಎಸ್. ನಾವಲಗಿ, ಎಸ್.ಬಿ. ಬದಾಮಿ, ಎಂ.ಎಸ್. ಗುಡಗುಂಟಿ, ವ್ಹಿ.ಎಂ. ಹಿರೇಮಠ, ವೆಂಕಟೇಶ ರಾಠೋಡ, ಬಿ.ಜಿ.ಹೊನವಾಡ, ಎಸ್.ಎಚ್.ಕುರ್ತಕೋಟಿ, ಪಿ.ಎನ್.ಹಳ್ಳಿಕೇರಿ ವಿಷಯಗಳನ್ನು ಮಂಡಿಸಿ ಒಪ್ಪಿಗೆ ಪಡೆದರು. ಎಂ.ಜಿ. ವಾಲಿ ವಕೀಲರು ವಂದಿಸಿದರು. ಸಂಜಯ ನಡುವಿನಮನಿ ನಿರೂಪಿಸಿದರು.