ಜಿಲ್ಲೆ

ಉತ್ತರ ಕನ್ನಡ ಜಿಲ್ಲೆಯಲ್ಲಿ 64 ಜನರಿಗೆ ಸೋಂಕು

ಕಾರವಾರ: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ. ಶುಕ್ರವಾರ 3318 ಜನರ ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ 64 ಜನರಿಗೆ (ಶೇ.2 ರಷ್ಟು) ಸೋಂಕು ಪತ್ತೆಯಾಗಿದೆ.

ಶನಿವಾರ 38 ಜನರಿಗೆ ಸೋಂಕು ಖಚಿತವಾಗಿದ್ದು, 39 ಜನ ಗುಣವಾಗಿದ್ದಾರೆ. ಶಿರಸಿ, ಕಾರವಾರದಲ್ಲಿ ತಲಾ 5, ಕುಮಟಾದಲ್ಲಿ 2, ಹೊನ್ನಾವರದಲ್ಲಿ 10, ಭಟ್ಕಳದಲ್ಲಿ 4, ಸಿದ್ದಾಪುರದಲ್ಲಿ 3, ಯಲ್ಲಾಪುರದಲ್ಲಿ 9 ಜನರಿಗೆ ಕರೊನಾ ತಗುಲಿದೆ.

ಕಾರವಾರದಲ್ಲಿ 6, ಕುಮಟಾದಲ್ಲಿ 8, ಹೊನ್ನಾವರದಲ್ಲಿ 15, ಶಿರಸಿಯಲ್ಲಿ 6, ಹಳಿಯಾಳದಲ್ಲಿ 4 ಜನ ಸೋಂಕು ಮುಕ್ತರಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 12538 ಜನರಿಗೆ ಸೋಂಕು ತಗುಲಿದ್ದು, 11314 ಜನ ಕರೊನಾದಿಂದ ಗುಣವಾಗಿದ್ದಾರೆ. 160 ಜನ ಮೃತಪಟ್ಟಿದ್ದು, 1037 ಸಕ್ರಿಯ ಪ್ರಕರಣಗಳಿವೆ.