ಕಾರವಾರ: ಜಿಲ್ಲೆಯಲ್ಲಿ 117 ಜನರಿಗೆ ಕರೊನಾ ಇರುವುದು ಶನಿವಾರ ಖಚಿತವಾಗಿದೆ. 86 ಜನ ಗುಣ ಹೊಂದಿದ್ದಾರೆ. ಒಂದು ಸಾವು ಸಂಭವಿಸಿದೆ. ಕಾರವಾರದಲ್ಲಿ 14, ಅಂಕೋಲಾದಲ್ಲಿ 10, ಕುಮಟಾದಲ್ಲಿ 12, ಹೊನ್ನಾವರದಲ್ಲಿ 9, ಭಟ್ಕಳದಲ್ಲಿ 22, ಶಿರಸಿಯಲ್ಲಿ 25, ಸಿದ್ದಾಪುರದಲ್ಲಿ 5, ಯಲ್ಲಾಪುರದಲ್ಲಿ 11, ಜೊಯಿಡಾದಲ್ಲಿ 1 ಹಳಿಯಾಳ ಹಾಗೂ ದಾಂಡೇಲಿ ಸೇರಿ 8 ಜನರಲ್ಲಿ ಸೋಂಕು ಇರುವುದು ಖಚಿತವಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 6804 ಕ್ಕೆ ಏರಿಕೆಯಾಗಿದೆ. 811 ಜನ ಆಸ್ಪತ್ರೆಗಳಲ್ಲಿ 1048 ಜನ ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಕಾರವಾರದಲ್ಲೇ ಅತೀ ಹೆಚ್ಚು ಎಂದರೆ 357 ಸಕ್ರಿಯ ಪ್ರಕರಣಗಳಿವೆ.
ಕಾರವಾರದಲ್ಲಿ 6, ಅಂಕೋಲಾದಲ್ಲಿ 4, ಕುಮಟಾದಲ್ಲಿ 25, ಜೊಯಿಡಾದಲ್ಲಿ 1, ಹೊನ್ನಾವರ ಹಾಗೂ ಭಟ್ಕಳದಲ್ಲಿ ತಲಾ 17, ಹಳಿಯಾಳ ಮತ್ತು ದಾಂಡೇಲಿ ಸೇರಿ 16 ಜನ ಗುಣ ಹೊಂದಿ ಬಿಡುಗಡೆಯಾಗಿದ್ದಾರೆ. ಒಟ್ಟಾರೆ ಗುಣವಾದವರ ಸಂಖ್ಯೆ 4865 ಆಗಿದೆ.
ಅಂಕೋಲಾದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಒಟ್ಟು ಕರೊನಾಕ್ಕೆ ಬಲಿಯಾದವರ ಸಂಖ್ಯೆ 80 ತಲುಪಿದೆ. ಹಳಿಯಾಳ ಹಾಗೂ ದಾಂಡೇಲಿ ಸೇರಿ ಒಟ್ಟು 20 ಜನರು ಇದುವರೆಗೆ ಕರೊನಾದಿಂದ ಮೃತಪಟ್ಟಿದ್ದಾರೆ. 14 ಜನರು ಮೃತಪಟ್ಟ ಭಟ್ಕಳ ಕರೊನಾ ಸಾವಿನಲ್ಲಿ 2ನೇ ಸ್ಥಾನದಲ್ಲಿದೆ.