ಜಿಲ್ಲೆ

ಉತ್ತಮ ಸಾಧನೆಯಿಂದ ಸಂಸ್ಥೆ ಕೀರ್ತಿ ಹೆಚ್ಚಿಸಲಿ

ರಾಯಬಾಗ: ಉನ್ನತ ಹುದ್ದೆ ಪಡೆಯಲು ವಿದ್ಯಾರ್ಥಿಗಳು ಈಗಿನಿಂದಲೇ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕೆಂದು ಆದರ್ಶ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಈರಗೌಡ ಪಾಟೀಲ ಹೇಳಿದರು.

ತಾಲೂಕಿನ ಬಾವನಸೌಂದತ್ತಿ ಗ್ರಾಮದ ಆದರ್ಶ ಶಿಕ್ಷಣ ಸಂಸ್ಥೆಯ ಬಾಜೀರಾವ ಮಗದುಮ್ಮ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಸಂಸ್ಥೆ ಕೀರ್ತಿ ಹೆಚ್ಚಿಸಬೇಕು ಎಂದರು.

ಶಿರಗುಪ್ಪಿ ಕೆಎಲ್‌ಇ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ.ಜಯವೀರ ಎ.ಕೆ. ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಜ್ಯ್ನಾನ ಮತ್ತು ಸದೃಢ ಆರೋಗ್ಯ ಸಂಪಾದಿಸಬೇಕು ಎಂದು ತಿಳಿಸಿದರು.

ಸಂಸ್ಥೆ ಉಪಾಧ್ಯಕ್ಷ ಜೆ.ಎಂ.ಮಗದುಮ್ಮ, ಕಾರ್ಯದರ್ಶಿ ಎ.ಟಿ.ಕೂಗೆ, ಸದಸ್ಯರಾದ ಎ.ಡಿ.ಜನಾಜ, ಎ.ಜೆ.ಕಾಮಗೌಡ, ಆರ್.ಬಿ.ಪಾಟೀಲ, ಬಿ.ಜೆ.ಜನಾಜ, ಎ.ಡಿ.ಕಾಮಗೌಡ, ಕುಮಾರ ಕಾಮಗೌಡ ಹಾಗೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು. ಮುಖ್ಯ ಶಿಕ್ಷಕ ಅರುಣ ಸಲಗರೆ ಸ್ವಾಗತಿಸಿದರು. ಸಿಂಚನಾ ಪಾಟೀಲ ನಿರೂಪಿಸಿದರು. ಸಹನಾ ಕೂಗೆ ವಂದಿಸಿದರು.