ಸೇಡಂ: ಸಮಾಜದಲ್ಲಿನ ದೇವಸ್ಥಾನ, ಮಠ-ಮಾನ್ಯಗಳು ಜನರಲ್ಲಿ ಸಂಸ್ಕಾರ ನಿರ್ಮಿಸುವುದರ ಜತೆಗೆ ಅಧ್ಯಾತ್ಮದ ಬದುಕು ಕಟ್ಟಿಕೊಡಲು ಪ್ರೇರಣೆಯಾಗಲಿವೆ ಎಂದು ಹಾರಕೂಡದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಹೇಳಿದರು.
ಇಟಕಾಲ್‌ನಲ್ಲಿ ಜೀರ್ಣೋದ್ಧಾರಗೊಂಡ ಶ್ರೀ ಬಸವೇಶ್ವರ ದೇವಾಲಯ ಗುರುವಾರ ಲೋಕಾರ್ಪಣೆ ಮಾಡಿದ ಅವರು, ಸಕಲ ಜೀವರಾಶಿಗಳಲ್ಲಿ ಮಾನವನ ಜೀವನ ಅತ್ಯಂತ ಶ್ರೇಷ್ಠವಾಗಿದೆ. ಅದನ್ನು ಅರಿಯದ ಅನೇಕರು ತಮ್ಮ ಅಮೂಲ್ಯ ಬದುಕು ಗೊತ್ತೂ ಗುರಿಯಿಲ್ಲದೆ ಹಾಳು ಮಾಡಿಕೊಳ್ಳುತ್ತಿದ್ದಾರೆ. ಶ್ರೇಷ್ಠ ಜೀವನ ಸಾರ್ಥಕಗೊಳ್ಳಲು ಅಂತರAಗದಲ್ಲಿ ಅಧ್ಯಾತ್ಮದ ಅರಿವು ಅಗತ್ಯವಾಗಿದೆ. ಹಿಂದೆ ಹಾರಕೂಡ ಚನ್ನಬಸವ ಶಿವಾಚಾರ್ಯರು ಇಟಕಾಲ್‌ನಲ್ಲಿ ನೆಲೆಸಿದ್ದನ್ನು ಸ್ಮರಿಸಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮಾತನಾಡಿ, ತಾವು ಮೊದಲು ಶಾಸಕನಾಗಿದ್ದಾಗ ದೇವಾಲಯದ ಜೀರ್ಣೋದ್ಧಾರಕ್ಕೆ 5 ಲಕ್ಷ ಅನುದಾನ ನೀಡಿದ್ದೆ. ಇದೀಗ ಶಿಖರ ಇತರ ಕಾಮಗಾರಿ ಬಾಕಿ ಉಳಿದಿರುವ ಬಗ್ಗೆ ಗಮನಕ್ಕೆ ತಂದಿದ್ದು, ಅಗತ್ಯ ಅನುದಾನ ಒದಗಿಸುವ ಭರವಸೆ ನೀಡಿದರು.
ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಮಾತನಾಡಿ, ದೇವಾಲಯಗಳು ಸಂಸ್ಕಾರ-ಸAಸ್ಕೃತಿಯ ಪ್ರತೀಕ. ಪ್ರತಿಯೊಬ್ಬರೂ ಜೀವನದಲ್ಲಿ ಭೌತಿಕಕ್ಕಿಂತ ಅಧ್ಯಾತ್ಮದ ಸಂಪತ್ತು ಹೆಚ್ಚಿಸಿಕೊಳ್ಳಬೇಕು. ಧರ್ಮ ಮಾರ್ಗದಲ್ಲಿ ಬದುಕು ಸಾಗಿಸಿದರೆ ಸುಖ ಶಾಂತಿ ದೊರೆಯಲಿದೆ ಎಂದರು. ಗುರುಮಠಕಲ್‌ನ ಶ್ರೀ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿದರು.
ಗ್ರಾಪಂ ಅಧ್ಯಕ್ಷೆ ನರಸಿಂಗಮ್ಮ ಲಾಲಪ್ಪ, ಶಿವಲಿಂಗರೆಡ್ಡಿ ಬೆನಕನಹಳ್ಳಿ, ಭೀಮರೆಡ್ಡಿ ದುಗನೂರ, ರವೀಂದ್ರ ನಂದಿಗಾಮ, ನರಸರೆಡ್ಡಿ ಇತರರಿದ್ದರು. ನೀಲಪ್ಪ ತಂಬಾಕೆ ಪ್ರಾರ್ಥಿಸಿದರು. ಲಾಲಪ್ಪ ಯಾದವ್ ಸ್ವಾಗತಿಸಿದರು. ಗುಂಡಪ್ಪ ಆವಂಟಿ ನಿರೂಪಣೆ ಮಾಡಿದರು. ನಾರಾಯಣರೆಡ್ಡಿ ವಂದಿಸಿದರು.