ಮುಂಡರಗಿ: ಮಹರ್ಷಿ ವಾಲ್ಮೀಕಿಯವರು ಮನುಕುಲದ ಮಹಾಪುರುಷರು. ಅವರು ರಚಿಸಿದ ರಾಮಾಯಣ ಮಹಾನ್‌ಗ್ರಂಥ ಮನುಷ್ಯನಿಗೆ ಹುಟ್ಟಿನಿಂದ ಅಂತ್ಯದವರೆಗೆ ಬದುಕಿಗೆ ಅಗತ್ಯವಿರುವ ಮೌಲ್ಯಗಳನ್ನು ತಿಳಿಸಿಕೊಡುತ್ತದೆ. ಮುಂದಿನ ಪೀಳಿಗೆಗೆ ಅವರ ತತ್ವ ಆದರ್ಶಗಳನ್ನು ತಿಳಿಸಿಕೊಡುವ ಕೆಲಸವಾಗಬೇಕು ಎಂದು ತಹಸೀಲ್ದಾರ್ ಎರ‌್ರಿಸ್ವಾಮಿ ಪಿ.ಎಸ್. ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ತಾಲೂಕು ಆಡಳಿತ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹರ್ಷಿ ವಾಲ್ಮೀಕಿಯವರು ಇಡೀ ಮನುಕುಲಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಅವರು ಇಡೀ ಮನುಕುಲಕ್ಕೆ ಆದರ್ಶವಾಗಿದ್ದಾರೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಲಕ್ಷ್ಮಣ ಪೂಜಾರ, ನಿವೃತ್ತ ಪ್ರಾಧ್ಯಾಪಕ ಬಿ.ಎಫ್. ಈಟಿ, ನಿವೃತ್ತ ಶಿಕ್ಷಕ ಎಚ್.ಡಿ. ಪೂಜಾರ, ಚಂದ್ರು ಪೂಜಾರ, ಯಂಕಪ್ಪ ಯಕ್ಲಾಸಪೂರ, ಮಂಜುನಾಥ ಮುಧೋಳ ಮತ್ತಿತರರು ಮಾತನಾಡಿದರು.
ರಾಮಣ್ಣ ಕೋಳಿ, ಪ್ರಕಾಶ ಹಲವಾಗಲಿ, ಮೈಲಾರಪ್ಪ ಕಲಕೇರಿ, ಸುರೇಶ ಮಾಗಡಿ, ವೆಂಕಟೇಶ ಬಂಡೆಣ್ಣವರ, ಕನಕಪ್ಪ ಕಾತರಕಿ, ಗಣೇಶ ಭರಮಕ್ಕನವರ, ರಾಜಾಭಕ್ಷ್ಮೀ ಬೆಟಗೇರಿ, ಶ್ರೀನಿವಾಸ ಕೊರ್ಲಗಟ್ಟಿ, ಕಳಕಪ್ಪ ಜಲ್ಲಿಗೇರಿ, ಮಾರುತಿ ನಾಗರಹಳ್ಳಿ, ಲಕ್ಷ್ಮಣ ತಗಡಿನಮನಿ, ಸೋಮಣ್ಣ ಹೈತಾಪೂರ, ಕವಿತಾ ನಾಯಕ, ಮಂಜುಳಾ ಇಟಗಿ, ಅಶೋಕ ಚೂರಿ, ಹನುಮಂತ ಚನ್ನದಾಸರ, ಸಿಪಿಐ ಮಂಜುನಾಥ ಕುಸುಗಲ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇತರರು ಇದ್ದರು. ಶ್ರೀಕಾಂತ ಅರಹುಣಸಿ ನಿರೂಪಿಸಿದರು. ಅರುಣಾ ಸೋರಗಂವಿ ವಂದಿಸಿದರು.