ನಿಪ್ಪಾಣಿ: ಗುರು-ಶಿಷ್ಯರ ಗೌರವ ಹೆಚ್ಚಿಸುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ವಿಎಸ್‌ಎಂ ಸಂಸ್ಥೆಯ ಜಿ.ಐ.ಬಾಗೇವಾಡಿ ಶಾಲೆ ಕಾರ್ಯ ಶ್ಲಾಘನೀಯ ಎಂದು ಕ್ಯಾರಗುಡ್ಡದ ಅವಜೀಕರ ಆಶ್ರಮದ ಅಭಿನವ ಮಂಜುನಾಥ ಸ್ವಾಮೀಜಿ ಹೇಳಿದರು.
ಸ್ಥಳೀಯ ವಿಎಸ್‌ಎಂ ಜಿ.ಐ.ಬಾಗೇವಾಡಿ ಪ್ರೌಢಶಾಲೆಯ 10ನೇ ತರಗತಿ ಮತ್ತು ವಿಎಸ್‌ಎಂ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಉತ್ತಮ ಶಿಕ್ಷಣದಿಂದ ಶಕ್ತಿ ಸಿಗಲಿದೆ ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಸುನೀಲ ಪಾಟೀಲ ಮಾತನಾಡಿ, ಜೀವನದಲ್ಲಿ ಉತ್ತಮ ಶಿಕ್ಷಕರಿಲ್ಲದಿದ್ದರೂ ಪರವಾಗಿಲ್ಲ. ಕೆಟ್ಟವರ ಸಂಗ ಮಾಡಬಾರದು ಎಂದರು. ವಿದ್ಯಾ ಸಂವರ್ಧಕ ಮಂಡಳದ ವೈಸ್‌ಚೇರ್ಮನ್ ಪಪ್ಪು ಪಾಟೀಲ ಮಾತನಾಡಿದರು.
ವಿದ್ಯಾರ್ಥಿನಿ ಸೃಷ್ಟಿ ಕವತನಳ್ಳಿ ಭರತ ನಾಟ್ಯ ಸಾದರಪಡಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸಂಜಯ ದೇಸಾಯಿ ಬಹುಮಾನ ವಿತರಿಸಿದರು.
ಮಂಡಳದ ಸಂಚಾಲಕ ಸಂಜಯ ಮೊಳವಾಡೆ, ಹರಿಶ್ಚಂದ್ರ ಶಾಂಡಗೆ, ಉಪಾಧ್ಯಕ್ಷ ರಜತ ಢೋಲೆ, ಆನಂದ ಗಿಂಡೆ, ಶೇಖರ ಪಾಟೀಲ, ಪ್ರೌಢಶಾಲೆ ಮುಖ್ಯ ಶಿಕ್ಷಕ ಪ್ರಕಾಶ ಐನಾಪುರೆ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಯಲ್ಲಪ್ಪ ಹಂಡಿ, ವಿವಿಧ ಅಂಗಸಂಸ್ಥೆಗಳ ಮುಖ್ಯಸ್ಥರಾದ ಡಾ. ನಿಂಗಪ್ಪ ಮಾದಣ್ಣವರ, ಗಜಾನನ ಕಮತೆ, ಜ್ಞಾನದೇವ ನಾಯಿಕ, ಶಿಕ್ಷಕ ಎಸ್.ಎ.ಕಾಂಬಳೆ ಸ್ವಾಗತಿಸಿದರು. ಭುವನೇಶ್ವರಿ ಅಳ್ಳಿಮೋರೆ, ಮಾಳಿ ನಿರೂಪಿಸಿದರು. ಮೇಘಾರಾಣಿ ಮಗದುಮ್ ವಂದಿಸಿದರು.