ಜಿಲ್ಲೆ

ಉತ್ತಮ ಶಿಕ್ಷಣ ಪಡೆದು ಸ್ವದೇಶದಲ್ಲೇ ಸೇವೆ ಮಾಡಿ

ಅಣ್ಣಿಗೇರಿ: ವಿದ್ಯೆಗಿರುವ ಬೆಲೆ ಬೇರೆ ಯಾವುದಕ್ಕೂ ಇಲ್ಲ. ಶಿಕ್ಷಣ ಅಂಕ ಗಳಿಕೆಗೆ ಸೀಮಿತವಾಗದೆ ಸರ್ವಾಂಗೀಣ ಅಭಿವೃದ್ಧಿಗೆ ಪೂರವಾಗಬೇಕು. ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ಪಡೆದು ಜೀವನ ಉಜ್ವಲಗೊಳಿಸಿಕೊಳ್ಳಬೇಕು ಎಂದು ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಹೇಳಿದರು.

ಪಟ್ಟಣದ ಪಂಪ ಭವನದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸೇನೆ ವತಿಯಿಂದ ಭಾನುವಾರ ಆಯೋಜಿಸಿದ್ದ ಸ್ವಾತಂತ್ರೋತ್ಸವ, ರಾಯಣ್ಣೋತ್ಸವ, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು, ‘ವಿದ್ಯಾರ್ಥಿಗಳು ಶಿಕ್ಷಣ ಪಡೆದು ಉದ್ಯೋಗ ಅರಸಿ ಹೊರ ದೇಶಕ್ಕೆ ಹೋಗದೆ ನಾವಿದ್ದ ಕ್ಷೇತ್ರದಲ್ಲಿಯೇ ಒಳ್ಳೆಯ ಅಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸಬೇಕು. ಯೋಧ ಹಾಗೂ ಸಮಾಜ ಸೇವಕ ಪರುಶರಾಮ ದಿವಾನದ ಅವರ ಕಾರ್ಯ ಶ್ಲಾಘನೀಯ’ ಎಂದರು.

ಸಾನ್ನಿಧ್ಯ ವಹಿಸಿದ್ದ ದಾಸೋಹ ಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿ, ಮಕ್ಕಳು ಮೊಬೈಲ್ ಬಳಸುವುದನ್ನು ಬಿಟ್ಟು ಉತ್ತಮ ಶಿಕ್ಷಣ ಪಡೆದು ಉನ್ನತ ಸಾಧನೆ ಮಾಡಬೇಕು ಎಂದರು.

ಶಾಸಕ ಎನ್.ಎಚ್.ಕೋನರಡ್ಡಿ, ಸದಾನಂದ ಡಂಗನವರ, ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ, ಯೋಧ ಪರಶುರಾಮ ದಿವಾನರ ಮಾತನಾಡಿದರು. ಷಣ್ಮುಖ ಗುರಿಕಾರ, ಪರಶುರಾಮ ದಿವಾನದ, ರವೀಂದ್ರನಾಥ ದಂಡಿನ, ಬುಡ್ಡೆಶರೀಫ್ ನದೀಮ್ ಮುಲ್ಲಾ, ರಾಮಕೃಷ್ಣ ರೋಳ್ಳಿ, ದ್ಯಾಮಣ್ಣ ಕುಗ್ಗಿ, ಸ್ನೇಹಾ ಜಾಧವ, ಜಿಯಾ ಬೇಗ್ ರೊಕ್ಕದಕಟ್ಟೆ, ವಿಜಯಲಕ್ಷ್ಮೀ ಜಕರಡ್ಡಿ, ಅಮೃತ ಮೀಸಿ, ವಿ.ಡಿ. ಅಂದಾನಗೌಡ್ರ, ನಿಂಗಪ್ಪ ಜಕ್ಕಲಿ, ಅರ್ಜುನ ಕಲಾಲ ಇತರರು ಇದ್ದರು.