ಜಿಲ್ಲೆ

ಉತ್ತಮ ಪ್ರಜೆಗಳಾಗಿ ಬಾಳಲು ಯೋಗಭ್ಯಾಸ ಸಹಕಾರಿ

ಚಿತ್ರದುರ್ಗ: ಅಪರಾಧಿ ಮನೋಭಾವ ಹೋಗಲಾಡಿಸಿ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಲು ಯೋಗ ಸಹಕಾರಿಯಾಗಿದೆ ಎಂದು ಆಯುಷ್ ಇ ಲಾಖೆ ಜೆಎನ್ ಕೋಟೆ ಆಯುಷ್ ಆರೋಗ್ಯ ಮಂದಿರದ ಹಿರಿಯ ಆಡಳಿತ ವೈದ್ಯಾಧಿಕಾರಿ ಡಾ.ಪಿ.ವಿಜಯಲಕ್ಷ್ಮೀ ಹೇಳಿದರು.

ನಗರದಲ್ಲಿ ಜೂ.21ರಂದು ಆಯೋಜಿಸಿರುವ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಬುಧವಾರ ಜಿಲ್ಲಾ ಕಾರಾಗೃಹದ ನಿ ವಾಸಿಗಳಿಗೆ ಏರ್ಪಡಿಸಿದ್ದ 3 ದಿನಗಳ ಯೋಗಭ್ಯಾಸ ತರಬೇತಿ ಉದ್ಘಾಟಿಸಿ ಮಾತನಾಡಿ,ದೈಹಿಕ, ಮಾನಸಿಕ ಸದೃಢತೆಗೆ ಹಾಗೂ ಸಾತ್ವಿಕ ಚಿಂತನೆ ಗಳಿಗಾಗಿ ಯೋಗಭ್ಯಾಸ,ಧ್ಯಾನ,ಪ್ರಾಣಾಯಾಮಗಳನ್ನು ನಿತ್ಯ ರೂಢಿಸಿಕೊಳ್ಳ ಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾರಾಗೃಹ ಅಧೀಕ್ಷಕ ಸಿದ್ದರಾಮ ಬಿ.ಪಾಟೀಲ್ ಮಾತನಾಡಿ,ಕಾಲ ಮತ್ತು ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಅಪರಾಧ ಕೃತ್ಯ ಗಳಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ ನಮ್ಮ ಮನಸ್ಸು,ಬುದ್ಧಿ ನಮ್ಮ ಹಿಡಿತದಲ್ಲಿದ್ದರೆ ಯಾವುದೇ ವ್ಯಕ್ತಿ ಅಪರಾಧಿಯಾಗಿ ಜೈಲಿಗೆ ಬರುವುದಿಲ್ಲ ಎಂದರು.

245ಕ್ಕೂ ಕಾರಾಗೃಹ ನಿವಾಸಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು. ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಅಧ್ಯಕ್ಷ ರವಿ ಕೆ.ಅಂಬೇಕರ್, ಕಾರಾಗೃಹ ವಾರ್ಡನ್ ರಾಜೇಂದ್ರಕೊಪರ್ಡೆ,ಸಹಾಯಕ ಜೈಲರ್ ರಾಯಣ್ಣಯರ್ಕಲ್,ಶಿಕ್ಷಕ ಶ್ರೀರಾಮರೆಡ್ಡಿ ಮತ್ತಿತರರು ಇದ್ದರು.