ಜಿಲ್ಲೆ

ಉತ್ತಮ ಪ್ರಜೆಗಳನ್ನು ರೂಪಿಸುವ ಹೊಣೆ ಶಿಕ್ಷಕರ ಮೇಲಿದೆ

ಚಿತ್ರದುರ್ಗ: ಜೀವನದಲ್ಲಿ ಯಾರು ಎಷ್ಟೇ ಉನ್ನತ ಹುದ್ದೆಗೇರಿದರೂ ಅದರ ಹಿಂದೆ ಶಿಕ್ಷಕರ ಮಾರ್ಗದರ್ಶನ,ಪರಿಶ್ರಮವಿರುತ್ತದೆ ಎಂದು ಜಿಪಂ ಸಿಇಒ ಎ ಸ್.ಜೆ.ಸೋಮಶೇಖರ್ ಹೇಳಿದರು.
ಶಿಕ್ಷಣ ಇಲಾಖೆ,ಜಿಲ್ಲಾ ಮತ್ತು ತಾಲೂಕು ಪ್ರೌಢಶಾಲಾ ವಿಜ್ಞಾನ ಶಿಕ್ಷಕರ ಕ್ಲಬ್ ಸಹಯೋಗದಲ್ಲಿ ನಗರದ ತ.ರಾ.ಸು.ರಂಗಮಂದಿರದಲ್ಲಿ ಗುರು ವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ವಿಜ್ಞಾನ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದುದು.
ಪಠ್ಯಬೋಧನೆಯೊಂದಿಗೆ ಅನ್ಯ ಕಾರ‌್ಯಗಳ ನಿರ್ವಹಣೆ ಜವಾಬ್ದಾರಿಗಳಿರುವುದರಿಂದ ಶಿಕ್ಷಕರ ಸಹಜವಾಗಿ ಒತ್ತಡದಲ್ಲಿ ಕೆಲಸ ಮಾಡ ಬೇಕಾಗುತ್ತ ದೆ. ಆದರೂ ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಪ್ರಮುಖ ಹೊಣೆಗಾರಿಕೆ ತಮ್ಮಗಳ ಮೇಲಿದೆ ಎಂಬುದನ್ನು ಶಿಕ್ಷಕರು ಮರೆ ಯುವಂತಿಲ್ಲವೆಂದರು.
ಡಿಡಿಪಿಐ ಕೆ.ರವಿಶಂಕರ್‌ರೆಡ್ಡಿ ಅವರು ಮಾತನಾಡಿ,ಶಿಕ್ಷಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವುದಾಗಿ ಹೇಳಿದರು. ಬಿಇಒ ಎಸ್.ನಾಗಭೂಷಣ್, ಶಿಕ್ಷಣಾಧಿಕಾರಿಗಳಾದ ಎನ್. ಆರ್.ತಿಪ್ಪೇಸ್ವಾಮಿ, ಸಿದ್ದಪ್ಪ, ವಿಷಯ ಪರಿವೀಕ್ಷಕರಾದ ಗೋವಿಂದಪ್ಪ,ಸವಿತಾ,ಚಂದ್ರಣ್ಣ,ಬಸವರಾಜ್‌ಓಲೇಕಾರ್, ಸಂಪನ್ಮೂಲವ್ಯಕ್ತಿ ರಾಘವೇಂದ್ರಭಟ್,ಮುಖ್ಯಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಚ್.ನಾಗೇಂದ್ರಪ್ಪ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಶಿವಣ್ಣ, ಜಿ ಲ್ಲಾ ವಿಜ್ಞಾನ ಶಿಕ್ಷಕರ ಕ್ಲಬ್ ಅಧ್ಯಕ್ಷ ಬಿ.ವಿ.ನಾಥ್ ಇದ್ದರು.
ಕಳೆದ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ವಿಜ್ಞಾನ ವಿಷಯದಲ್ಲಿ ಶೇ.ನೂರು ಅಂಕಗಳಿಸಿದ ವಿದ್ಯಾರ್ಥಿಗಳು, ಪಿಎಚ್‌ಡಿ ಪದವಿ ಪಡೆದ ವಿಜ್ಞಾನ ಶಿಕ್ಷಕರು, ರಾಜ್ಯಮತ್ತು ಜಿಲ್ಲಾ ಉತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿ ಪುರಸ್ಕೃತರು ಹಾಗೂ ನಿವೃತ್ತ ವಿಜ್ಞಾನ ಶಿಕ್ಷಕರನ್ನು ಸನ್ಮಾನಿಸಲಾಯಿತು.