ಜಿಲ್ಲೆ

ಉತ್ತಮ ಪರಿಸರವಿದ್ದರೆ ಆರೋಗ್ಯವಂತ ಸಮಾಜ

ಮದ್ದೂರು: ಉತ್ತಮ ಪರಿಸರ ಇದ್ದರೆ ಮಾತ್ರ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ನೆಮ್ಮದಿ ಜೀವನ ನಡೆಸಲು ಸಾಧ್ಯ ಎಂದು ರೋಟರಿ ಅಧ್ಯಕ್ಷ ಎಸ್.ಪಿ.ಶ್ರೀನಿವಾಸ್ ಅಭಿಪ್ರಾಯಪಟ್ಟರು.

ತಾಲೂಕಿನ ವಳಗೆರೆಹಳ್ಳಿ ಪ್ರಮೀಳಾ ವೀರಪ್ಪ ಪ್ರೌಢಶಾಲೆಯಲ್ಲಿ ಸೋಮವಾರ ಸರ್ ಎಂ.ವಿಶ್ವೇರಯ್ಯ ಅವರ ಜನ್ಮದಿನ ಹಾಗೂ ಇಂಜಿನಿಯರ್‌ಗಳ ದಿನದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಎಷ್ಟೇ ಹಣ ಇದ್ದರು ಆರೋಗ್ಯ ಸರಿಯಿಲ್ಲದಿದ್ದರೆ ಸುಖಮಯ ಜೀವನ ನಡೆಸಲು ಸಾಧ್ಯವಿಲ್ಲ ಎಂಬುವುದನ್ನು ಪ್ರತಿಯೊಬ್ಬರು ಮನಗಾಣಬೇಕು. ಉತ್ತಮ ಪರಿಸರ ಇದ್ದರೆ ಮಾತ್ರ ಭೂ ಮಂಡಲದಲ್ಲಿ ಸಕಲ ಜೀವರಾಶಿ ಸುಖವಾಗಿ ಹಾಗೂ ಆರೋಗ್ಯವಾಗಿ ಇರಲು ಸಾಧ್ಯ. ಇಂದಿನ ಯುಜ ಜನಾಂಗ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ವ್ಯಾಸಂಗ ಮಾಡಿ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಉತ್ತಮ ಪ್ರಜೆಯಾಗಿ ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ರೋಟರಿ ವತಿಯಿಂದ ಸೊಳ್ಳೆಪುರದ ದೇವಸ್ಥಾನ, ವಳಗೆರೆಹಳ್ಳಿ ಹಾಗೂ ಸಾದೊಳಲು ಶಾಲಾ ಆವರಣದಲ್ಲಿ ವಿವಿಧ ರೀತಿಯ ಸಸಿಗಳನ್ನು ನೆಡಲಾಯಿತು. ರೋಟರಿ ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ್‌ನಾಯ್ಡು, ಪದಾಧಿಕಾರಿಗಳಾದ ಅನುಪಮಾ, ವಿ.ಕೆ.ರಾಧಾ, ಮಧುಸೂದನ್, ಇಂಜಿನಿಯರ್ ಪ್ರಕಾಶ್, ಮಲ್ಲರಾಜು, ಅನಿಲ್ ಬಾಬು, ಪ್ರವೀಣ್, ಬಿ.ಸಿ.ಯೋಗೇಶ್, ಮುಖ್ಯ ಶಿಕ್ಷಕ ರವಿ, ಶಿಕ್ಷಕರು, ಗ್ರಾಮಸ್ಥರು ಇದ್ದರು.