ಜಿಲ್ಲೆ

ಉತ್ತಮ ಪರಿಸರ ನಿರ್ಮಾಣಕ್ಕೆ ಸಹಕರಿಸಿ

ನಾಪೋಕ್ಲು: ಪ್ರತಿಯೊಬ್ಬರೂ ತಮ್ಮ ಪರಿಸರದಲ್ಲಿ ಗಿಡಗಳನ್ನು ನೆಡುವ ಮೂಲಕ ಉತ್ತಮ ಪರಿಸರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಕೆ. ಎಂ. ಮುತ್ತಪ್ಪ ಹೇಳಿದರು. ಸಮೀಪದ ನರಿಯಂದಡ ಪ್ರೌಢಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದವನಮೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಮಕ್ಕಳಲ್ಲಿ ಪರಿಸರ ಪ್ರೇಮ ರೂಢಿಸಬೇಕು ಎಂದರು.

ಲಯನ್ಸ್ ವಲಯ ಅಧ್ಯಕ್ಷ ಮುಕ್ಕಾಟಿರ ವಿನಯ್ ಕೊಡುಗೆಯಾಗಿ ನೀಡಿದ 25 ವಿವಿಧ ರೀತಿಯ ಹಣ್ಣಿನ ಗಿಡಗಳನ್ನು ಶಾಲಾ ಪರಿಸರದಲ್ಲಿ ನೆಡಲಾಯಿತು.
ಕ್ಲಬ್ ಉಪಾಧ್ಯಕ್ಷ ಎ.ಪಿ. ವಸಂತ್ ಮುತ್ತಪ್ಪ, ಖಜಾಂಚಿ ಎಂ.ಬಿ ಕುಟ್ಟಪ್ಪ, ಶಾಲಾ ಆಡಳಿತ ಮಂಡಳಿ ಸದಸ್ಯರು ಇದ್ದರು.