ಚಿಕ್ಕೋಡಿ ತಾಲೂಕಿನ ಯಡ್ರಾವ ಗ್ರಾಮದಲ್ಲಿರುವ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಜರುಗಿತು. ಡಾ. ಪ್ರಭಾಕರ ಕೋರೆ, ಮಲ್ಲಿಕಾರ್ಜುನ ಕೋರೆ, ಅಜಿತ್ ದೇಸಾಯಿ, ಪ್ರಕಾಶ ಪಾಟೀಲ ಇತರರಿದ್ದರು. 
ಜಿಲ್ಲೆ

ಉತ್ತಮ ಚಿಂತನೆಯಿಂದ ಸಾಧನೆ ಸಾಧ್ಯ

ಉತ್ತಮ, ಚಿಂತನೆಯಿಂದ, ಸಾಧನೆ, ಸಾಧ್ಯ, ಮಾಂಜರಿ, Good, thoughtful, achievement, possible, manjari

ಮಾಂಜರಿ: ಮಕ್ಕಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲಿ ಎಂಬ ಉದ್ದೇಶದಿಂದ ಪಾಲಕರು ಕಷ್ಟಪಟ್ಟು ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಾರೆ. ಯಾರು ಅದನ್ನು ಅರಿತು ಜವಾಬ್ದಾರಿಯಿಂದ ಮುನ್ನಡೆಯುತ್ತಾರೋ ಅವರು ಉತ್ತಮ ಭವಿಷ್ಯ ಕಟ್ಟಿಕೊಳ್ಳುತ್ತಾರೆ ಎಂದು ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.

ಸಮೀಪದ ಯಡ್ರಾವ ಗ್ರಾಮದಲ್ಲಿರುವ ಶಿವಶಕ್ತಿ ಶುಗರ್ ಸಕ್ಕರೆ ಕಾರ್ಖಾನೆ ಕಾರ್ಯಕ್ಷೇತ್ರದಲ್ಲಿರುವ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.90 ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಭಾನುವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಿರಂತರ ಅಧ್ಯಯನ ಮತ್ತು ಉತ್ತಮ ಚಿಂತನೆಯಿಂದ ಮಾತ್ರ ಏನನ್ನಾದರೂ ಸಾಸಲು ಸಾಧ್ಯ. ಸಾಧನೆಗೆ ಸಂಕಲ್ಪ ಮಾಡಬೇಕು. ಓದುವ ವಯಸ್ಸಿನಲ್ಲಿ ಯಾರು ಸುಖ

ಅಪೇಕ್ಷೆ ಪಡುತ್ತಾರೋ ಅವರು ಎಂದಿಗೂ ಜೀವನದಲ್ಲಿ ಏಳಿಗೆ ಹೊಂದಲು ಸಾಧ್ಯವಿಲ್ಲ. ಕೇವಲ ಶಿಕ್ಷಕರ ಪಾಠ, ಪಾಲಕರ ಪ್ರೀತಿಯಿಂದಲೂ ಏನನ್ನು ಸಾಸಲಾಗದು. ಜಗತ್ತಿಗೆ ತನ್ನ ಇರುವಿಕೆ ಗೊತ್ತುಮಾಡಬೇಕಾದರೆ ಪ್ರಾಮಾಣಿಕ ಪ್ರಯತ್ನ ಅವಶ್ಯ ಎಂದು ಹೇಳಿದರು.

ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಮಾತನಾಡಿ, ವಿದ್ಯಾರ್ಥಿಗಳು ಸೃಜನಾತ್ಮಕ ಚಿಂತನೆಯೊಂದಿಗೆ, ಪ್ರಯೋಗಶೀಲತೆಯಿಂದ ಅಧ್ಯಯನ ನಡೆಸಬೇಕು. ನಿತ್ಯ ಹೊಸ ಕೌಶಲ ಮೈಗೂಡಿಸಿಕೊಳ್ಳಬೇಕು. ಪದವಿ ಪಡೆದರಷ್ಟೇ ಸಾಲದು, ಸಮಾಜ ಸೇವೆಗೆ ಸಿದ್ಧರಿರಬೇಕು ಎಂದು ವಿದ್ಯಾರ್ಥಿಗಳಗೆ ತಿಳಿ ಹೇಳಿದರು.

ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳು: ಶಿವಶಕ್ತಿ ಶುಗರ್ ಸಕ್ಕರೆ ಕಾರ್ಖಾನೆ ಕಾರ್ಯಕ್ಷೇತ್ರದಲ್ಲಿರುವ ಕೆಎಲ್‌ಇ ಸಂಸ್ಥೆಯ ಕನ್ನಡ ಮಾಧ್ಯಮ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ನಿರೀಕ್ಷಾ ಪಡಲಾಳೆ ಶೇ.97.12 ಅಂಕ ಪಡೆದು ಕ್ಲಸ್ಟರ್‌ಮಟ್ಟದಲ್ಲಿ ಪ್ರಥಮ, ಲಕ್ಷ್ಮೀ ಚೌಗಲಾ, ಪ್ರೀತಿ ಮಾಳಿ ಶೇ.98.48 ಅಂಕಗಳಿಸಿ ಕ್ಲಸ್ಟರ್‌ಮಟ್ಟದಲ್ಲಿ ದ್ವಿತೀಯ, ಸೃಷ್ಟಿ ಕಮತ್ಯಾನಟ್ಟಿ ಶೇ.94.72 ಅಂಕ ಗಳಿಸಿ ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.

ಮುಖ್ಯ ಶಿಕ್ಷಕ ದಯಾನಂದ ಕಬ್ಬುರೆ, ಶಿಕ್ಷಕರಾದ ಶ್ರೀಧರ ಕೋಳಿ, ಆದರ್ಶ ಮಗದುಮ್, ರೇವತಿ ಉಪ್ಪಿನ, ಸುಹಾಸ ಬನವಾಣೆ, ಆರ್.ಪಿ.ಪಾಟೀಲ, ಆರ್.ಬಿ.ನೆಜಕರ, ವೈಶಾಲಿ ಹುಲ್ಲೆಪ್ಪಗೋಳ, ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕರಾದ ಅಜಿತ್‌ರಾವ್ ದೇಸಾಯಿ, ಮಾಜಿ ನಿರ್ದೇಶಕ ಪ್ರಕಾಶ ಪಾಟೀಲ ಸತ್ಯಪ್ಪ ಭೀಸ್ಟೆ, ಸದಾಶಿವ ನಿಪ್ಪಾಣಿ, ಕಲ್ಲಪ್ಪ ನಿಂಗನೂರೆ ಇತರರಿದ್ದರು.

ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಬಾಗಿಲು ತೆರೆದಿರುವ ಕೆಎಲ್‌ಇ ಶಿಕ್ಷಣ ಸಂಸ್ಥೆ ಸದಾ ಕಾಲಕ್ಕೂ ಸ್ಮರಣೀಯವಾಗಿದೆ. ಇಲ್ಲಿ ಓದುತ್ತಿರುವ ಎಲ್ಲರೂ ಭಾಗ್ಯಶಾಲಿಗಳು. ವಿದ್ಯಾರ್ಥಿಗಳು ಪದವಿ ಜತೆಗೆ ಕೌಶಲ ಅಳವಡಿಸಿಕೊಳ್ಳಬೇಕು. ಕೌಶಲವಿಲ್ಲದ ಪದವಿ ಕೇವಲ ಪ್ರಮಾಣ ಪತ್ರಕ್ಕಷ್ಟೇ ಸೀಮಿತ ಎಂಬುದನ್ನು ಅರಿತುಕೊಳ್ಳಬೇಕು. ವಿದ್ಯಾರ್ಥಿಗಳು ದೊಡ್ಡ ಕನಸು ಕಾಣಬೇಕು. ಅದಕ್ಕೆ ತಕ್ಕಂತೆ ದಿಟ್ಟ ಹೆಜ್ಜೆ ಇಡಬೇಕು ಅಂದಾಗ ಸಾಧನೆ ಸಾಧ್ಯ. | ಡಾ. ಪ್ರಭಾಕರ ಕೋರೆ ಕೆಎಲ್‌ಇ ಶಿಕ್ಷಣ ಸಂಸ್ಥೆ ಕಾರ್ಯಾಧ್ಯಕ್ಷ