ಜಿಲ್ಲೆ

ಉತ್ತಮ ಆರೋಗ್ಯಕ್ಕೆ ಯೋಗ ಮದ್ದು

ಕೆಂಭಾವಿ: ಉತ್ತಮ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ಯೋಗವನ್ನು ಮೈಗೂಡಿಸಿಕೊಳ್ಳಬೇಕು ಎಂದು ಖ್ಯಾತ ಆಯುರ್ವೇದ ವೈದ್ಯ ಡಾ.ಪ್ರಸಾದ ಕುಲಕರ್ಣಿ ಹೇಳಿದರು.

ಪಟ್ಟಣದ ಉತ್ತರಾದಿ ಮಠದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಗಣೇಶೋತ್ಸವ ನಿಮಿತ್ತ ಭಾನುವಾರ ಶ್ರೀ ಸತ್ಯಪ್ರಮೋದ ಯುವ ಸೇನೆ ಹಾಗೂ ಪ್ರಧಾನಮಂತ್ರಿ ಜನೌಷಧ ಕೇಂದ್ರದಿAದ ಹಮ್ಮಿಕೊಂಡ ಉಚಿತ ಆರೋಗ್ಯ ಶಿಬಿರದಲ್ಲಿ ಮಾತನಾಡಿದ ಅವರು, ಪ್ರಾಚೀನ ಕಾಲದ ವೇದಗಳಲ್ಲಿ ನಮಗೆ ಹಲವು ಬಗೆಯ ಉತ್ತಮ ಆರೋಗ್ಯಕರ ಸೂತ್ರ ತಿಳಿಸಿದ್ದು, ಅವುಗಳನ್ನು ಅನುಸರಿಸಿದರೆ ನಾವು ನಮ್ಮ ಜೀವಿತಾವಧಿಯವರೆಗೂ ಆರೋಗ್ಯದಿಂದ ಇರಬಹುದು ಎಂದರು.

ವೇದ, ಪುರಾಣ, ಕಾವ್ಯ, ಕವನ, ಉತ್ತಮ ಸಾಹಿತ್ಯ, ಭಗವಂತನ ಧ್ಯಾನ, ಪ್ರಣಾಯಾಮ ಮತ್ತು ಯೋಗ ನಮ್ಮ ಆರೋಗ್ಯಕ್ಕೆ ಸಹಕಾರಿಯಾಗಿವೆ. ಇಂದಿನ ಆಧುನಿಕ ಯುಗದ ಭರಾಟೆಯಲ್ಲಿ ಅವುಗಳೆಲ್ಲವು ನಶಿಸಿ ಹೋಗುತ್ತಿರುವುದು ಕಳವಳಕಾರಿಯಾಗಿದೆ ಎಂದರು.
ಆಯುರ್ವೇದ ಔಷಧ ಮನುಷ್ಯನ ಸರ್ವ ರೋಗಕ್ಕೂ ರಾಮಬಾಣವಾಗಿದ್ದು, ಔಷಧಿಯ ಜತೆಗೆ ನಮ್ಮ ದಿನನಿತ್ಯದ ಆಹಾರದಲ್ಲಿ ಕೆಲವು ಬದಲಾವಣೆ ತಂದರೆ ನಾವು ಆರೋಗ್ಯವಾಗಿರಬಹುದು ಎಂದು ಸಲಹೆ ನೀಡಿದರು.

ವಿನಾಯಕ ಆಸ್ಪತ್ರೆ ಖ್ಯಾತ ವೈದ್ಯ ಡಾ.ದಯಾನಂದ ಡಿಗ್ಗಾವಿ ಮಾತನಾಡಿ, ಇಂದಿನ ದಿನಗಳಲ್ಲಿ ಹೆಚ್ಚಾಗಿ ಹೃದಯರೋಗದ ಸಮಸ್ಯೆ ಹಲವರನ್ನು ಕಾಡುತ್ತಿದ್ದು ಅದನ್ನು ತಡೆಗಟ್ಟಲು ವೈದ್ಯರ ಸಲಹೆ ಜತೆಗೆ ನಮ್ಮ ನಿತ್ಯ ಕಾರ್ಯಚಟುವಟಿಕೆಗಳಲ್ಲಿ ಕೆಲವು ಬದಲಾವಣೆ ತಂದುಕೊಳ್ಳಬೇಕು ಎಂದರು.
ಡಾ.ದಯಾನAದ ಡಿಗ್ಗಾವಿ, ಡಾ.ಪ್ರಸಾದ ಕುಲಕರ್ಣಿ, ಡಾ.ಗಿರೀಶ ಕುಲಕರ್ಣಿ ಹಾಗೂ ಡಾ.ಲಕ್ಷ್ಮೀ ಕುಲಕರ್ಣಿ ಸೇರಿ ವೈದ್ಯರ ತಂಡ ಜನರ ಆರೋಗ್ಯ ತಪಾಸಣೆ ಮಾಡಿ ಉಚಿತ ಔಷಧ ವಿತರಿಸಿದರು.

ಜನೌಷಧ ಕೇಂದ್ರದ ಪುಟ್ಟರಾಜ ಹಿರೇಮಠ, ಶ್ರೀಹರಿ ನಾಡಿಗೇರ, ಅನಂತ ಜಮದರಖಾನಿ, ಬಸಯ್ಯ ಹಿರೇಮಠ, ಮಲ್ಲಣ್ಣ ದಳವಾಯಿ, ದೇವು ಪಾಸೋಡಿ ಇತರರಿದ್ದರು. ಗಣೇಶೋತ್ಸವದ ನಿಮಿತ್ತ ಭಾನುವಾರ ಹಮ್ಮಿಕೊಂಡ ಚಿಣ್ಣರ ಧಾರ್ಮಿಕ ಪಠಣ, ನೃತ್ಯ, ನಾಟಕ ಸೇರಿ ಹಲವು ಸಾಂಸ್ಕೃತಿಕ ಕರ‍್ಯಕ್ರಮ ಜನಮನ ರಂಜಿಸಿದವು. ಅನಘಾ ಪವನ ಕುಲಕರ್ಣಿ ಅವರ ಭರತನಾಟ್ಯ ನೋಡುಗರನ್ನು ತನ್ನತ್ತ ಸೆಳೆಯಿತು.