ಬಸವಕಲ್ಯಾಣ ತಾಲೂಕಿನ ಚಿಟ್ಟಾ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಹದಿಹರೆಯದವರ ಆರೋಗ್ಯ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಸ್ತ್ರೀರೋಗ ತಜ್ಞೆ ಡಾ.ಜ್ಯೋತಿ ಹಂಚಾಟೆ, ಡಾ.ಮಹೇಶ ಪಾಟೀಲ್, ಗೋವಿಂದ ಪಾಟೀಲ್, ಪರಮೇಶ್ವರ ಇದ್ದರು. 
ಜಿಲ್ಲೆ

ಉತ್ತಮ ಆರೋಗ್ಯಕ್ಕೆ ಬೇಕು ಸಮತೋಲನ ಆಹಾರ

ಬಸವಕಲ್ಯಾಣ: ಸಮತೋಲನ ಆಹಾರ ಸೇವನೆ ಆರೋಗ್ಯ ರಕ್ಷಣೆಗೆ ಸಹಕಾರಿಯಾಗುತದೆ. ಜಂಕ್ ಫುಡ್ ಸೇವನೆ, ಅತಿಯಾದ ಮೊಬೈಲ್ ಬಳಕೆ, ನಿದ್ದೆಗೆಡುವಿಕೆ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಪಾರಂಪರಿಕ ಆಹಾರ, ಯೋಗ, ವ್ಯಾಯಾಮ ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಸ್ತ್ರೀರೋಗ ತಜ್ಞೆ ಡಾ.ಜ್ಯೋತಿ ಹಂಚಾಟೆ ಹೇಳಿದರು.

ಬಸವಕಲ್ಯಾಣ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘ ಹಾಗೂ ಯುಥ್ ಫಾರ್ ಸೇವಾ ಆ್ಯಂಡ್ ಡಾಕ್ಟರ್ ಫಾರ್ ಸೇವಾ ಸಂಘಟನೆ ಸಹಯೋಗದಡಿ ಚಿಟ್ಟಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಹದಿಹರೆಯದವರ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಿಶೋರಾವಸ್ಥೆಯಲ್ಲಿ ಅರಿವು, ದೈಹಿಕ ಮತ್ತು ಮಾನಸಿಕ, ಭಾವನಾತ್ಮಕ ಬದಲಾವಣೆ ಕುರಿತು ಮಾಹಿತಿ ನೀಡಿದರು.

ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಮಹೇಶ ಪಾಟೀಲ್ ಮಾತನಾಡಿ, ಶೈಕ್ಷಣಿಕ ಪ್ರಗತಿಯಲ್ಲಿ ವ್ಯಕ್ತಿ ಮತ್ತು ಸಮಾಜದ ಅಭ್ಯುದಯ ಅಡಗಿದೆ. ವಿದ್ಯಾರ್ಥಿಗಳು ಶ್ರಮವಹಿಸಿ ಅಭ್ಯಸಿಸುವ ಜತೆಗೆ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮುಖ್ಯಗುರು ಗೋವಿಂದ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆ ಸಂಯೋಜಕ ರಾಮೇಶ್ವರ ಇತರರಿದ್ದರು.