ಜಿಲ್ಲೆ

ಉತ್ತಮ ಆರೋಗ್ಯಕ್ಕೆ ಪೌಷ್ಟಿಕ ಆಹಾರ ಸೇವಿಸಿ

ಅರಟಾಳ: ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರ ಸಹಕಾರಿಯಾಗಿವೆ. ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ನಿರ್ಲಕ್ಷ್ಯ ತೋರದೆ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಗ್ರಾಪಂ ಪಿಡಿಒ ಎ.ಜಿ.ಎಡಕೆ ಹೇಳಿದರು.

ಗ್ರಾಮದ ಗುಡ್ಡದ ಶ್ರೀ ಮಾಳಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಸೋಮವಾರ ಗ್ರಾಪಂ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ದುಡಿಯೋಣ ಬಾ ಅಭಿಯಾನದಡಿ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿ, ಆರೋಗ್ಯವಂತರಾಗಿರಲು ಪೌಷ್ಟಿಕ ಆಹಾರ ಸೇವಿಸಬೇಕು ಎಂದರು.

ಉಪಕೇಂದ್ರದ ಹೆಲ್ತ್ ಆಫೀಸರ್ ಡಾ.ವಿಜಯಕುಮಾರ ಆಸಂಗಿ ಮಾತನಾಡಿ, ಉತ್ತಮ ಆಹಾರ ಪದ್ಧತಿ ರೂಢಿಸಿಕೊಂಡು, ಪ್ರತಿನಿತ್ಯ ಯೋಗ ಮಾಡಬೇಕು. ತಾಯಂದಿರು ಮಗುವಿನ ಆರೋಗ್ಯದ ಜಾಗೃತಿ ವಹಿಸಬೇಕು. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಪೌಷ್ಟಿಕ ಆಹಾರ ಮತ್ತು ತಾಯಿ ಹಾಲು ಅವಶ್ಯ ಎಂದರು.

ಗ್ರಾಪಂ ಅಧ್ಯಕ್ಷೆ ಕಾಂತಾಬಾಯಿ ಹಟ್ಟಿ, ಯಲ್ಲಪ್ಪ ಹಟ್ಟಿ, ಪಾಂಡಪ್ಪ ಮಾಂಗ, ಸುರೇಶ ಕಾಂಬಳೆ, ಗುರಪ್ಪ ಜಂಬಗಿ, ಆಶಾ ಕಾರ್ಯಕರ್ತೆ ವಿಜಯಲಕ್ಷ್ಮಿ ಕಾಂಬಳೆ, ದ್ರಾಕ್ಷಾಯಿಣಿ ಕಾಂಬಳೆ, ಕವಿತಾ ಕಾಂಬಳೆ, ರೇಖಾ ಕಾಂಬಳೆ, ಸುಜಾತಾ ಕಾಂಬಳೆ, ಲಲಿತಾ ಅರ್ಜುಣಗಿ, ಮಹಾದೇವ ಮಾದರ, ಕಾಶಪ್ಪ ಮಾದರ ಇತರರಿದ್ದರು.