ಜಿಲ್ಲೆ

ಉತ್ತಮ ಆರೋಗ್ಯ ನಿಜವಾದ ಸಂಪತ್ತು

ಯಾದಗಿರಿ: ಆರೋಗ್ಯ ಸಂಪತ್ತಿನ ಮುಂದೇ ಯಾವ ಸಂಪತ್ತು ಇಲ್ಲ. ಕಾರಣ ಪ್ರತಿಯೊಬ್ಬರು ಉತ್ತಮ ಆರೋಗ್ಯ ಹೊಂದುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಬಿರಾದಾರ ಹೇಳಿದರು.

ತಾಲೂಕಿನ ಹತ್ತಿಕುಣಿ ಗ್ರಾಮದಲ್ಲಿ ಜಿ¯್ಲÁಡಳಿತ, ಜಿಪಂ, ಜಿ¯್ಲÁ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡ ಆರೋಗ್ಯ ಅರಿವು ಮತ್ತು ಯೋಗ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬರೂ ನಿತ್ಯ ಬೆಳಗ್ಗೆ ೩೦ ನಿಮಿಷಗಳ ಕಾಲ ವಾಯು ವಿಹಾರ, ಯೋಗಾಭ್ಯಾಸ ಮಾಡುವುದನ್ನು ರೂಢಿಸಿಕೊಳ್ಳಬೇಕು. ಅಲ್ಲದೆ ವರ್ಷದಲ್ಲಿ ಒಂದೆರಡು ಬಾರಿಯಾದರೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು. ಮಹಿಳೆಯರನ್ನು ಹೆಚ್ಚಾಗಿ ಕಾಡುತ್ತಿರುವ ರಕ್ತಹೀನತೆ ಬಗ್ಗೆ ಆಶಾ ಕಾರ್ಯಕರ್ತೆಯರು ಜಾಗೃತಿ ಮೂಡಿಸಿ, ಸೂಕ್ತ ಆಹಾರ ಸೇವನೆ, ಚಿಕಿತ್ಸೆ ಕೊಡಿಸಲು ಗಮನ ಹರಿಸಬೇಕು ಎಂದು ಹೇಳಿದರು.

ಯುವಕಲ್ಲಿ ಹೃದಯ ಸಂಬAಧಿ ಕಾಯಿಲೆಗಳು ಜಾಸ್ತಿಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಹಿಂದೆಲ್ಲ ಹಿರಿಯರನ್ನು ಮಕ್ಕಳು ಆಸ್ಪತ್ರೆಗೆ ಕರೆದುಕೊಂಡು ಹೊಗುತ್ತಿದ್ದರು. ಆದರೆ ಹಿರಿಯರೇ ಮಕ್ಕಳಿಗೆ ಕರೆದುಕೊಂಡುವ ಹೋಗುವು ಸ್ಥಿತಿ ಈಗ ನಿರ್ಮಾಣವಾಗಿದೆ. ಅಂದರೇ ಜೀವನ ಶೈಲಿ ಸುಧಾರಿಸಿಕೊಳ್ಳುತ್ತ ಯುವ ಜನತೆ ನಿಗಾ ವಹಿಸುತ್ತಿಲ್ಲ ಎಂದು ಡಾ.ಬಿರಾದಾರ ಕಳವಳ ವ್ಯಕ್ತಪಡಿಸಿದರು.

ಸಂಪನ್ಮೂಲ ವ್ಯಕ್ತಿ ಡಾ.ಅರುಣ ಸಿದ್ರಿ ಮಾತನಾಡಿ, ಯಾವುದೇ ಕಾರಣಕ್ಕೂ ಸಣ್ಣ-ಪುಟ್ಟ ವಿಷಯಗಳಿಗೆ ಗಂಭೀರವಾಗಿ ಆಲೋಚನೆ ಮಾಡಬಾರದು. ಒಳ್ಳೆಯ ಹವ್ಯಾಸ ಬೆಳೆಸಿಕೊಳ್ಳಬೇಕು. ಅಂದಾಗ ಮಾತ್ರ ಒತ್ತಡದಿಂದ ಹೊರ ಬರಲು ಸಾಧ್ಯ. ಹೃದಯ ಸ್ತಂಬನವಾದ ಸಮಯದಲ್ಲಿ ಅದನ್ನು ಹೇಗೆ ತಡೆಯಬಹುದು ಎಂಬ ಬಗ್ಗೆ ಮಾಹಿತಿ ನೀಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ಹಣಮಂತರಡ್ಡಿ, ಯೋಗ ಶಿP್ಷÀಕ ಹಣಮಂತ ದ್ಯಾರನೋರ ಮಾತನಾಡಿದರು. ಡಾ. ಮುದಾಸಿರ್, ಡಾ.ರಮೇಶ ಸಜ್ಜನ್, ಡಾ.ಬಸರಡ್ಡಿ ಪಾಟೀಲï ಗಾಜರಕೋಟ್, ಡಾ.ರಶೀದ್ ಇತರರಿದ್ದರು.