ಸವದತ್ತಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಉಚಿತ ಹೃದಯ ರೋಗ ತಪಾಸಣಾ ಶಿಬಿರವನ್ನು ಹೃದಯ ತ ಡಾ.ಅನಿಲ ಹನಮಂತಗಡ ಉದ್ಘಾಟಿಸಿದರು. ಡಾ.ಎನ್​.ಆರ್​. ಸವತಿಕರ, ಡಾ.ಗಣಂಜಯ ಸಾಳ್ವೆ, ಡಾ.ವೀರೇಶ ಮಾನ್ವಿ, ಡಾ.ರಂಜಿತ ನಾಯಿಕ ಇತರರಿದ್ದರು. 
ಜಿಲ್ಲೆ

ಉತ್ತಮ ಅಭ್ಯಾಸದಿಂದ ಹೃದಯ ಸ್ವಸ್ಥ


ಸವದತ್ತಿ: ಹೃದಯ ಆರೋಗ್ಯವಾಗಿರಬೇಕಾದರೆ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಹೃದಯ ತ ಡಾ.ಅನಿಲ ಹನಮಂತಗಡ ಹೇಳಿದರು.

ಪಟ್ಟಣದ ಕೆಎಲ್​ಇ ಸಂಸ್ಥೆಯ ಎಸ್​ವಿಎಸ್​ ಬೆಳ್ಳುಬ್ಬಿ ಮಹಾವಿದ್ಯಾಲಯದಲ್ಲಿ ಯೂತ್​ ರೆಡ್​ ಕ್ರಾಸ್​ ಟಕ, ಬೆಳಗಾವಿಯ ಕೆಎಲ್​ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೆದ್ಯಕಿಯ ಸಂಶೋಧನಾ ಕೇಂದ್ರ ಮತ್ತು ರೋಟರಿ ಕ್ಲಬ್​ ಆ್​ ಬೆಳಗಾವಿ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಉಚಿತ ಹೃದಯ ರೋಗ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಮನುಷ್ಯ ಊಟ ಮತ್ತು ಮನರಂಜನೆಯಲ್ಲಿ ವಿಷಯದಲ್ಲಿ ಮಿತವಾಗಿರಬೇಕು. ನಿತ್ಯ ಕಾಯಕ ಹಾಗೂ ವ್ಯಾಯಾಮ ಮಾಡಬೇಕು. ಆಗ ಮಾತ್ರ ನಮ್ಮ ದೇಹದ ಅಂಗಾಂಗಗಳು ಸರಿಯಾಗಿ ಕೆಲಸ ಮಾಡುತ್ತವೆ ಎಂದರು.

ತಾಲೂಕಿನ ವಿವಿಧ ಸ್ಥಳಗಳಿಂದ ಆಗಮಿಸಿದ 142 ಜನರು ಉಚಿತ ಹೃದಯ ರೋಗ ತಪಾಸಣೆ ಮಾಡಿಕೊಂಡರು. ಪ್ರಾಚಾರ್ಯ ಡಾ.ಎನ್​.ಆರ್​. ಸವತಿಕರ ಅಧ್ಯತೆ ವಹಿಸಿದ್ದರು. ವೈದ್ಯರಾದ ಡಾ.ಗಣಂಜಯ ಸಾಳ್ವೆ, ಡಾ.ವೀರೇಶ ಮಾನ್ವಿ, ಡಾ.ರಂಜಿತ ನಾಯಿಕ, ಡಾ.ಬಸವರಾಜ ಶಿರೋಳ, ಡಾ.ಪ್ರಸನ್ನ ಸಾಗರ, ಪ್ರೊ.ಕೆ. ರಾಮರೆಡ್ಡಿ, ಪ್ರೊ.ಎಸ್​.ಎಂ. ಹೊಳಿ, ಬಿ.ಕೆ. ಕಠಾರೆ, ವಿನಾಯಕ ಪುರಾಣಿಕ, ಶಿವಾನಂದ ವಗ್ಗರ, ದೇವಧನ್​ ಕಾಲ್ಪೊಲ್​, ನಿಖಿತಾ ಕಂಠಿ, ವಿಶಾಲ್​ ಬೋಸ್ರೆ, ನಾಗೇಶ ಪಾಟೀಲ, ಪ್ರಾಧ್ಯಾಪಕರು ಮತ್ತು ಬೋಧಕೇತರ ಹಾಗೂ ಆಸ್ಪತ್ರೆಯ ಸಿಬ್ಬಂದಿ ಇದ್ದರು.