ಅರಸೀಕೆರೆ ತಾಲೂಕಿನ ಬ್ಯಾಡರಹಳ್ಳಿ ಯಾದವರಟ್ಟಿ ಗ್ರಾಮದಲ್ಲಿ ಫಲಾನುಭವಿಗಳಿಗೆ ಗ್ರಾಪಂ ಸದಸ್ಯ ಜಯರಾಮ್ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ ಕಲ್ಪಿಸುವ ಪರಿಕರಗಳನ್ನು ವಿತರಿಸಿದರು. ಮಂಜುನಾಥ್, ಸತೀಶ್, ಕರಿಯಮ್ಮ, ನೀಲಾವತಿ, ರಾಧಾಮಣಿ, ಶಾಂತಮ್ಮ, ನಿಂಗಮ್ಮ ಇದ್ದಾರೆ. 
ಜಿಲ್ಲೆ

ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ

Hassan

ಅರಸೀಕೆರೆ: ಕೇಂದ್ರ ಸರ್ಕಾರ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ ಸೌಲಭ್ಯ ಕಲ್ಪಿಸುವ ಮೂಲಕ ನಗರ ಹಾಗೂ ಗ್ರಾಮೀಣ ಜನರ ನೆರವಿಗೆ ಧಾವಿಸಿದೆ ಎಂದು ಪುರಲೇಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಜಯರಾಮ್ ಮೆಚ್ಚುಗೆ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಯೋಜನೆಯಡಿ ಆಯ್ಕೆಗೊಂಡಿರುವ ತಾಲೂಕಿನ ಬ್ಯಾಡರಹಳ್ಳಿ ಯಾದವರಹಟ್ಟಿ ಗ್ರಾಮದ 40 ಫಲಾನುಭವಿಗಳಿಗೆ ಗುರುವಾರ ಮಧ್ಯಾಹ್ನ ಉಚಿತ ಸಿಲಿಂಡರ್, ಸ್ಟೌ ಸೇರಿ ಇನ್ನಿತರ ಪರಿಕರ ವಿತರಿಸಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡ ಬಳಿಕ ಜಾತಿ, ವರ್ಗ ತಾರತಮ್ಯವಿಲ್ಲದೆ ದೇಶದ 15 ಕೋಟಿ ಕುಟುಂಬಗಳ ಗೃಹಿಣಿಯರಿಗೆ ಹೊಗೆ ರಹಿತ ಅಡುಗೆ ಮಾಡುವ ಅವಕಾಶ ಕಲ್ಪಿಸಿಕೊಟ್ಟಿರುವುದು ಹೆಮ್ಮೆಯ ಸಂಗತಿ. ವಾಸ್ತವ ಮರೆಮಾಚಲು ಹೊರಟಿರುವ ಕೆಲವರು ಬೆಲೆ ಏರಿಕೆ ಹೆಸರಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ನಾಟಕವಾಡುತ್ತಿದ್ದಾರೆ. ಪ್ರಜ್ಞಾವಂತ ನಾಗರಿಕರು ಮತಗಳಿಕೆ ನೆಪದಲ್ಲಿ ಇಲ್ಲಸಲ್ಲದ ಆರೋಪ ಮಾಡುವವರಿಗೆ ತಕ್ಕಪಾಠ ಕಲಿಸಬೇಕು. ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.