ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜ್‌ನಲ್ಲಿ ಸಂಗ್ರಹವಾಗಿರುವ ನೀರು. 
ಜಿಲ್ಲೆ

ಉಜನಿ ಜಲಾಶಯದಿಂದ ಭೀಮೆಗೆ ನೀರು

ಅಫಜಲಪುರ: ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ ೪೨ ಸಾವಿರ ಕ್ಯೂಸೆಕ್ ನೀರು ಹರಿಬಿಡಲಾಗಿದ್ದು, ಸೊನ್ನ ಬ್ಯಾರೇಜ್‌ಗೆ ಭಾನುವಾರ ರಾತ್ರಿಯವರೆಗೆ ನೀರು ತಲುಪಲಿದೆ ಎಂದು ಭೀಮಾ ಏತ ನೀರಾವರಿ ಎಇಇ ಸಂತೋಷ ಸಜ್ಜನ್ ತಿಳಿಸಿದ್ದಾರೆ.

ಉಜ್ಜನಿ ಮತ್ತು ವೀರ ಜಲಾಶಯದಿಂದ ಹೆಚ್ಚಿನ ನೀರು ಸೊನ್ನ ಬ್ಯಾರೇಜ್‌ಗೆ ಬರುತ್ತಿದ್ದು ಕೆಳ ಪಾತ್ರದ ನದಿಗೆ ನೀರು ಬಿಡಲಾಗುತ್ತಿದೆ. ಹೀಗಾಗಿ ಸಾರ್ವಜನಿಕರು ನದಿ ದಡದತ್ತ ಹೋಗಬಾರದು. ಸೊನ್ನ ಬ್ಯಾರೇಜ್‌ನಿಂದ ಈಗಾಗಲೇ ೪,೦೦೦ ಕ್ಯೂಸಕ್​ ನೀರು ಭೀಮಾ ನದಿಗೆ ಹರಿಬಿಡಲಾಗುತ್ತಿದೆ. ಮಳೆಯ ಮುನ್ಸೂಚನೆ ಇರುವ ಕಾರಣ ಜಲಾಶಯದ ಒಳಹರಿವು ಹೆಚ್ಚಾದಂತೆ ಹೊರ ಹರಿವು ಹೆಚ್ಚಲಿದೆ ಎಂದು ಹೇಳಿದ್ದಾರೆ.

ನದಿ, ಹಳ್ಳ, ಕೆರೆ ದಡದಲ್ಲಿ ಬಟ್ಟೆ ತೊಳೆಯುವುದು, ಈಜಾಡುವುದು, ದನ-ಕರುಗಳನ್ನು ಮೆಯಿಸುವುದು ಹಾಗೂ ಅಪಾಯವಿರುವ ಸೇತುವೆಗಳಲ್ಲಿ ಸಂಚರಿಸಬಾರದು. ಸಾಮಾಜಿಕ ಮಾಧ್ಯಮಗಳಲ್ಲಿ ರೀಲ್ಸ್ ಮಾಡುವವರು ಮೋಜಿಗಾಗಿ ಅಪಾಯದ ಮಟ್ಟದಲ್ಲಿರುವ ನದಿಯ ಹತ್ತಿರ ಹೋಗಬಾರದು. ಮೀನುಗಾರರಿಗೆ ಮೀನು ಹಿಡಿಯಲು ನದಿಯ ಕಡೆ ಹೋಗಬಾರದು ಎಂದು ತಿಳಿಸಿದ್ದಾರೆ.