ಜಿಲ್ಲೆ

ಉಚ್ಚಿಲ ಹೆದ್ದಾರಿಯಲ್ಲಿ ಅಪಘಾತ, ಬೈಕ್ ಸವಾರ ಸಾವು

ಪಡುಬಿದ್ರಿ; ರಾಷ್ಟ್ರೀಯ ಹೆದ್ದಾರಿ 66ರ ಉಚ್ದಿಲ ಪೇಟೆಯಲ್ಲಿ ಶನಿವಾರ ಬೆಳಗ್ಗೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದಾರೆ. ಹೆಜಮಾಡಿ ಎನ್ ಎಸ್ ರೋಡ್ ನ ನಿವಾಸಿ ಶಿಯಾಲಿ ಹಾಜಿ ಕನ್ನಂಗಾರ್ ಇವರ ಮಗ ಮುಹಮ್ಮದ್ ಅಲಿ ಮೃತಪಟ್ಟವರು. ಪಿಡ್ಲೂಡಿ ಕಾಂಟ್ರಕ್ಟರಾಗಿದ್ದರು. ಪತ್ನಿ. ಒಂದು ಗಂಡು ಒಂದು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ ಶನಿವಾರ ಬೆಳಗ್ಗೆ ಬೈಕ್ ನಲ್ಲಿ ಸಂಚರಿಸುತಿದ್ದಾಗ ಟೆಂಪೋ ಡಿಕ್ಕಿ ಹೊಡೆದಿತ್ತು. ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ಮೃತಪಟ್ಟರು.