ಜಿಲ್ಲೆ

ಉಚ್ಚಂಗಿಯಲ್ಲಮ್ಮ ಕೆಂಡೋತ್ಸವ ಅ. 12ಕ್ಕೆ

ಚಿತ್ರದುರ್ಗ: ರಾಜಮಾತೆ ಉಚ್ಚಂಗಿಯಲ್ಲಮ್ಮ ದೇಗುಲದಲ್ಲಿ ಶರನ್ನವರಾತ್ರಿ ಅಂಗವಾಗಿ 9 ದಿನದ ಉತ್ಸವಾಚರಣೆಗಾಗಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಶೈಲಾ ಪುತ್ರಿ ಆರಾಧನೆಯೊಂದಿಗೆ ಗುರುವಾರ ದೇವಿಗೆ ಎಲೆ ಅಲಂಕಾರ ಸೇವೆ ನೆರವೇರಿತು.

ಬನ್ನಿಮಹಾಕಾಳಮ್ಮ, ಉಚ್ಚಂಗಿಯಲ್ಲಮ್ಮ ದೇವಿಯ ಕೆಂಡೋತ್ಸವ ಈ ಬಾರಿ ಅ. 12ರ ವಿಜಯದಶಮಿ ದಿನದಂದು ಹಿಂದಿಗಿಂತಲೂ ಅದ್ಧೂರಿಯಾಗಿ ಜರುಗಲಿದೆ.

ಪ್ರತಿ ವರ್ಷದಂತೆ ಸಿಹಿನೀರು ಹೊಂಡದಲ್ಲಿ ದೇವಿಗೆ ಗಂಗಾಪೂಜೆಯಾದ ಬಳಿಕ ಸಂತೆಹೊಂಡ ಸಮೀಪದ ಬನ್ನಿಮಹಾಕಾಳಮ್ಮ ದೇಗುಲದ ಮುಂಭಾಗ ನೂರಾರು ಭಕ್ತರ ಸಮ್ಮುಖದಲ್ಲಿ ಕೆಂಡೋತ್ಸವ ನೆರವೇರಲಿದೆ. ಜತೆಗೆ ಬನ್ನಿ ಮುಡಿಯುವ ಸಂಪ್ರದಾಯ ಎಂದಿನಂತೆ ನಡೆಯಲಿದೆ ಎಂದು ಅರ್ಚಕ ಅಭಿಷೇಕ್ ತಿಳಿಸಿದ್ದಾರೆ.