ಜಿಲ್ಲೆ

ಉಚಿತವಾಗಿ ನೋಟ್ ಪುಸ್ತಕ ವಿತರಣೆ

ಚಿತ್ರದುರ್ಗ: ಜಿಲ್ಲೆಯ ಎಚ್.ಡಿ. ಪುರದ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಂಗಳವಾರ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.

ಅಲಮೇಲಮ್ಮ, ಎಸ್.ಆರ್. ರಂಗಯ್ಯ ಹಾಗೂ ರುದ್ರಮ್ಮ, ಜಿ.ಎಚ್. ಜಯಕುಮಾರ್ ಕುಟುಂಬದ ಪರವಾಗಿ ಎಸ್.ಆರ್. ಪ್ರಕಾಶ್, ಜಿ.ಜೆ. ಲಿಂಗರಾಜು ವಿತರಿಸಿದರು.

ಹೊಳಲ್ಕೆರೆ ಬಿಇಒ ಶ್ರೀನಿವಾಸ್ ಮಾತನಾಡಿ, ಸತತ 13 ವರ್ಷಗಳಿಂದಲೂ ಕುಟುಂಬದವರು ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ಸ್‌ಗಳನ್ನು ವಿತರಿಸುತ್ತಿರುವುದು ಸ್ವಾಗತಾರ್ಹ. ಇಂತಹ ಕಾರ್ಯ ಇತರರಿಗೂ ಸ್ಪೂರ್ತಿ ಆಗಲಿದೆ ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ಸುಮಿತ್ರಮ್ಮ, ಎಸ್‌ಡಿಎಂಸಿ ಅಧ್ಯಕ್ಷ ರಮೇಶ್, ಶಿಕ್ಷಣ ಸಂಯೋಜಕ ವಿಜಯ್, ಸಿಆರ್‌ಪಿ ವೀರೇಶ್, ಮುಖ್ಯ ಶಿಕ್ಷಕ ಕುಮಾರಸ್ವಾಮಿ, ವಾಗ್ದೇವಿ ಶಾಲೆಯ ಆಡಳಿತಾಧಿಕಾರಿ ಶಿವರಾಮ್, ಎಸ್‌ಡಿಎಂಸಿ ಸದಸ್ಯರಾದ ಹನುಮಂತ್, ರಾಮಣ್ಣ, ಗ್ರಾಮಸ್ಥರಾದ ಸತೀಶ್, ಸಂತೋಷ್, ಮಂಜುನಾಥ್, ಓಬಳೇಶ್ ಇತರರಿದ್ದರು.