ಜಿಲ್ಲೆ

ಉಚಿತ ಸೇವೆ ಸಲ್ಲಿಸಿದ ಶಿಕ್ಷಕನಿಗೆ ಸನ್ಮಾನ

ಗುಬ್ಬಿ: ತಾಲೂಕಿನ ಕಡಬ ಹೋಬಳಿಯ ಕೊಪ್ಪದಲ್ಲಿ ಸುಮಾರು 35 ವರ್ಷಗಳ ಕಾಲ ಶಿಕರಾಗಿ ಉಚಿತ ಸೇವೆ ಸಲ್ಲಿಸಿದ ಕೆ.ಎಸ್​.ಅಶ್ವತ್ಥ್​ ಅವರಿಗೆ ಶಾಲೆ ಹಳೇ ವಿದ್ಯಾರ್ಥಿಗಳಿಂದ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಹಳೆಯ ವಿದ್ಯಾರ್ಥಿ ಸಂದ ಅಧ್ಯ ಪಟೇಲ್​ ದೇವರಾಜ್​ ಮಾತನಾಡಿ, ಕಡಬ ಹೋಬಳಿ ಕೊಪ್ಪ ಗ್ರಾಮದ ಶ್ರೀ ಾನಗಂಗಾ ಪ್ರೌಢಶಾಲೆ 1990ರಲ್ಲಿ ಭೈರವೇಶ್ವರ ಸಂಸ್ಥೆಯ ಅಡಿ ಸ್ಥಾಪನೆಯಾಯಿತು. 23 ವರ್ಷವಾದರೂ ಸರ್ಕಾರ ಮಾನ್ಯತೆ ನೀಡಿಲ್ಲ. ಆದರೂ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಟ್ಟ ವಿಶೇಷ ಶಿಣ ಸಂಸ್ಥೆ ಇದಾಗಿದೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮುಖ್ಯಶಿಕ ಕೆ.ಎಸ್​.ಅಶ್ವತ್ಥ್​ ಅವರು, ಒಟ್ಟು 35 ವರ್ಷಗಳ ಕಾಲ ಮುಖ್ಯಶಿಕನಾಗಿ ಸೇವೆ ಸಲ್ಲಿಸಿದ್ದೇನೆ. ಆರಂಭದ ದಿನಗಳಲ್ಲಿ ನೆಲೆಯಿಲ್ಲದ ಸಂದರ್ಭದಲ್ಲಿ ಅಣ್ಣ ಅತ್ತಿಗೆಯ ಸಹಕಾರದಿಂದ ವಿದ್ಯಾರ್ಥಿಗಳಿಗೆ ಉಚಿತ ಶಿಣ ಕಲ್ಪಿಸಬೇಕೆಂಬ ಅಭಿಲಾಷೆ ಇಟ್ಟುಕೊಂಡು 23 ವರ್ಷಗಳ ಕಾಲ ಸರ್ಕಾರದಿಂದ ಯಾವುದೇ ವೇತನ ಪಡೆಯದೆ ಕೆಲಸ ಮಾಡಿದ್ದೇನೆ. ಈ ಸಂದರ್ಭವನ್ನು ಎಂದಿಗೂ ಮರೆಯುವುದಿಲ್ಲ ಎಂದು ಸ್ಮರಿಸಿದರು.

ದಂಪತಿಯನ್ನು ಅವರ ಮನೆಯಿಂದ ಬೆಳ್ಳಿ ರಥದಲ್ಲಿ ಕಾರ್ಯಕ್ರಮಕ್ಕೆ ಕರೆತರಲಾಯಿತು. ಅರ ದಾಸೋಹ ಸಹಾಯಕ ನಿರ್ದೇಶಕ ಜಗದೀಶ್​, ಜಿಲ್ಲಾಧ್ಯ ದಯಾನಂದ್​, ಯೋಗಾನಂದ, ಕಸಾಪ ಅಧ್ಯ ಯತೀಶ್​, ಹಳೇ ವಿದ್ಯಾರ್ಥಿ ಸಂದ ಪದಾಧಿಕಾರಿಯಾದ ತೇಜಸ್​, ಶ್ರೀನಿವಾಸ್​, ಮಂಜುನಾಥ್​, ರಮೇಶ್​, ಸುರೇಶ್​, ಪಿಡಿಒ ಮಂಜುಳಾ ಇತರರು ಇದ್ದರು.