?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ಉಚಿತ ಕಾನೂನು ಸಲಹಾ ಕೇಂದ್ರ ಆರಂಭ

ಚಿತ್ರದುರ್ಗ:ಚಿತ್ರದುರ್ಗ ತಹಸೀಲ್ದಾರ್ ಕಚೇರಿಯಲ್ಲಿ ಸ್ಥಾಪಿಸಿರುವ ಉಚಿತ ಕಾನೂನು ಸಲಹಾ ಕೇಂದ್ರಕ್ಕೆ ಬುಧವಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರೋಣವಾಸುದೇವ ಅವರು ಚಾಲನೆ ನೀಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ‌್ಯದರ್ಶಿ ಎಂ.ವಿ ಜಯ್,ಎಸಿ ಎಂ.ಕಾರ್ತಿಕ್,ತಹಸೀಲ್ದಾರ್ ಡಾ.ನಾಗವೇಣಿ, ಗ್ರೇಡ್-2 ತಹಶೀಲ್ದಾರ್ ನಾಗರಾಜ್,ಶಿರಸ್ತೇದಾರರಾದ ವತ್ಸಲಾಕುಮಾರಿ, ವಿನುತಾ ಮತ್ತಿತರರು ಇದ್ದರು.
ವಾರದಲ್ಲಿ 2 ದಿನ ಕಾರ‌್ಯನಿರ್ವಹಣೆ
ಈ ಕೇಂದ್ರ ವಾರದಲ್ಲಿ ಸೋಮವಾರ ಹಾಗೂ ಶುಕ್ರವಾರ ಬೆಳಗ್ಗೆ 10 ರಿಂದ ಸಂಜೆ 6ರವರೆಗೆ ಕಾರ‌್ಯನಿರ್ವಹಿಸಲಿದ್ದು,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ನಿಯೋಜಿಸಿರುವ ಇಬ್ಬರು ವಕೀಲರು ಉಚಿತ ಕಾನೂನು ನೆರವು ಮತ್ತು ಸಲಹೆ ನೀಡಲಿದ್ದಾರೆ. ದಾವೆ ದಾಖಲು ಮಾಡಲು ಅಥವಾ ದಾವೆ ವಿರುದ್ಧ ಪ್ರತಿಪಾದಿಸುವ ನಿಟ್ಟಿನಲ್ಲಿ ನೆರವು ದೊರೆಯಲಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು, ಕಾರ್ಖಾನೆ ಕಾರ್ಮಿಕರು,ಮಹಿಳೆಯರು,ಮಕ್ಕಳು, ವಾರ್ಷಿಕ ಆದಾಯ 3 ಲಕ್ಷ ರೂ.ಗಳಿಗಿಂತ ಕಡಿಮೆ ಇರುವ ಎಲ್ಲ ವರ್ಗದವರು ಜನರು,ಮಾನಸಿಕ ಅಥವಾ ಬೇರಾವುದೇ ನ್ಯೂನತೆಯನ್ನು ಹೊಂದಿರುವವರು, ಗುಂಪು ಘರ್ಷಣೆ,ಗಲಭೆ,ಪ್ರವಾಹ, ಭೂಕಂಪ, ಕೈಗಾರಿಕೆ ಸಂತ್ರಸ್ಥರು,ದೈಹಿಕ ವ್ಯಾಪಾರ ಅಥವಾ ಜೀತಕ್ಕೊಳಗಾದವರು, ಶಿಕ್ಷೆಗೆ ಒಳಗಾದ ಹಾಗೂ ವಿಚಾರಣಾಧೀನ ಬಂಧಿಗಳು, ರಕ್ಷಣಾ ಗೃಹ, ಮನೋರೋಗಿಗಳ ಆಸ್ಪತ್ರೆಗಳ ಅಭಿರಕ್ಷೆಯಲ್ಲಿರುವವರು,ಕ್ರಿಮಿನಲ್ ಪ್ರಕರಣ ಗಾ ಯಾಳು ಸಂತ್ರಸ್ಥರಿಗೂ ಉಚಿತ ಕಾನೂನು ಸಲಹೆ ಮತ್ತು ನೆರವು ದೊರೆಯಲಿದೆ.
ಅರ್ಹರು ಜಿಲ್ಲಾ,ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಶುಲ್ಕ ರಹಿತವಾಗಿ ಅರ್ಜಿ ಸಲ್ಲಿಸಿ ನೆರವು,ಸಲಹೆಯನ್ನು ಪಡೆಯ ಬಹು ದು. ದೂರವಾಣಿ ಸಂಖ್ಯೆ 15100ಕ್ಕೆ ಕರೆ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ನ್ಯಾಯಾಲಯದಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ದೂರವಾಣಿ ಸಂಖ್ಯೆ 08194-222322 ಗೆ ಸಂಪರ್ಕಿಸಬಹುದು.