ತರೀಕೆರೆ ತಾಪಂನಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಶಸ ಚಿಕಿತ್ಸಾ ಏರ್ಪಡಿಸಲಾಗಿತ್ತು. ಡಾ. ಟಿ.ಎಂ.ದೇವರಾಜ್, ಬಿ.ಎಸ್.ಭಗವಾನ್, ಕೆ.ಎಸ್.ಶಿವಣ್ಣ, ತ.ಮ.ದೇವಾನಂದ್, ಡಾ. ನಾಗರಾಜ್ ಇತರರಿದ್ದರು. 
ಜಿಲ್ಲೆ

ಉಚಿತ ಆರೋಗ್ಯ ಶಿಬಿರ ನಿರಂತರವಾಗಿರಲಿ

ತರೀಕೆರೆ: ನಿರಂತರ ನೇತ್ರ ತಪಾಸಣೆ ಮತ್ತು ಶಸ ಚಿಕಿತ್ಸಾ ಶಿಬಿರ ಆಯೋಜಿಸುತ್ತಿರುವ ಚಂದ್ರಪ್ಪ ಸೇವಾ ಪ್ರತಿಷ್ಠಾನ ಸೇರಿ ಇತರ ಸಂಘ ಸಂಸ್ಥೆಗಳ ಸೇವಾ ಕಾರ್ಯ ಅನನ್ಯವಾಗಿದೆ ಎಂದು ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಟಿ.ಎಂ.ದೇವರಾಜ್ ಹೇಳಿದರು.

ತಾಲೂಕು ಪಂಚಾಯಿತಿಯಲ್ಲಿ ಚಂದ್ರಪ್ಪ ಸೇವಾ ಪ್ರತಿಷ್ಠಾನ, ಅರಿವು ವೇದಿಕೆ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಉಚಿತ ನೇತ್ರ ತಪಾಸಣೆ ಮತ್ತು ಶಸ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಚಂದ್ರಪ್ಪ ಸೇವಾ ಪ್ರತಿಷ್ಠಾನದೊಂದಿಗೆ ಕೈಜೋಡಿಸಿರುವ ಸಂಘ ಸಂಸ್ಥೆಗಳು ಸಹಸ್ರಾರು ಜನರ ದೃಷ್ಟಿದೋಷ ನಿವಾರಿಸುವ ಮಹಾತ್ಕಾರ್ಯ ಮಾಡುತ್ತಿರುವುದು ಸೇವಾಭಾವನೆ ತೋರಿಸುತ್ತದೆ. ಸಂಘ, ಸಂಸ್ಥೆ ಮೂಲಕ ಸಮಾನ ಮನಸ್ಕರು ಒಗ್ಗೂಡಿ ಕೈಗೊಂಡಿರುವ ಈ ಕಾರ್ಯ ಸದಾ ಮುಂದುವರಿಯಲಿ ಎಂದು ಆಶಿಸಿದರು.

ಶಿಬಿರದಲ್ಲಿ 200ಕ್ಕೂ ಹೆಚ್ಚು ಜನ ನೇತ್ರ ತಪಾಸಣೆಗೊಳಪಟ್ಟರೆ, 73 ಮಂದಿ ಶಸ ಚಿಕಿತ್ಸೆಗೆ ಆಯ್ಕೆಯಾದರು. ಚಂದ್ರಪ್ಪ ಸೇವಾ ಪ್ರತಿಷ್ಠಾನದ ಗೌರವಾಧ್ಯಕ್ಷ ಬಿ.ಎಸ್.ಭಗವಾನ್, ಅರಿವು ವೇದಿಕೆ ಅಧ್ಯಕ್ಷ ಕೆ.ಎಸ್.ಶಿವಣ್ಣ, ಪ್ರಮುಖರಾದ ಡಾ. ಎಚ್.ಎಂ.ಮರುಳಸಿದ್ದಯ್ಯ ಪಟೇಲ್, ತ.ಮ.ದೇವಾನಂದ್, ಡಾ. ನಾಗರಾಜ್ ಇತರರಿದ್ದರು.