ಬಾಗಲಕೋಟೆ ನಗರದ ಬಸವೇಶ್ವರ ವೃತ್ತದಲ್ಲಿ ಕಾಶ್ಮೀರದಲ್ಲಿ ಪ್ರವಾಸಿಗರ ಭಯೋತ್ಪಾದಕರ ದಾಳಿ ಖಂಡಿಸಿ ಬಾಗಲಕೋಟೆ ಕಾಂಗ್ರೆಸ್ ಘಟಕದ ನೇತೃತ್ವದಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಯಿತು. 
ಜಿಲ್ಲೆ

ಉಗ್ರರ ದಾಳಿಯಲ್ಲಿ ರಾಜಕೀಯ ಸಲ್ಲ

ಬಾಗಲಕೋಟೆ: ಕಾಶ್ಮೀರದಲ್ಲಿ ಪ್ರವಾಸಿಗರ ಭಯೋತ್ಪಾದಕರ ದಾಳಿ ಖಂಡಿಸಿ ಬಾಗಲಕೋಟೆ ಕಾಂಗ್ರೆಸ್ ಘಟಕದ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಸವೇಶ್ವರ ವೃತ್ತದಲ್ಲಿ ಬುಧವಾರ ಸಂಜೆ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ವಕ್ತಾರ ಚಂದ್ರಶೇಖರ ರಾಠೋಡ ಮಾತನಾಡಿ, ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದ ಕೃತ್ಯ ಅತ್ಯಂತ ಖಂಡನೀಯ. ಯಾವುದೇ ಕಾರಣಕ್ಕೂ ಕ್ಷಮಿಸಲು ಸಾಧ್ಯವಿಲ್ಲ. ಇಂತಹ ಘಟನೆಗಳು ನಡೆದಾಗ ಭದ್ರಲೋಪವಿರುವುದು ಸ್ಪಷ್ಟವಾಗಿದೆ. ಕೇಂದ್ರ ಸರ್ಕಾರದ ನಿರ್ಲಕ್ಷ್ಯವು ಅಡಗಿದೆ. ಯಾವುದೇ ಕಾರಣಕ್ಕೂ ಹಾಗೇ ಬಿಡಬಾರದು. ಪ್ರತಿಕಾರ ತೀರಿಸಿಕೊಳ್ಳುವ ತನಕ ವಿರಮಿಸಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂತಹ ಘಟನೆಗಳಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರವು ತಮ್ಮ ರಾಜಕೀಯ ಬೆಳೆ ಬೆಯಿಸಿಕೊಳ್ಳಲು ತರವಲ್ಲ. ದೇಶಕ್ಕೆ ಧಕ್ಕೆ ಬಂದಾಗ ಸ್ವಾರ್ಥ ರಾಜಕೀಯ ಮಾಡುವುದು ಶೋಭೆ ತರುವದಿಲ್ಲ. ಕೂಡಲೇ ಒಗ್ಗಟ್ಟಾಗಿ ಹೋರಾಡುವಂತಾಗಬೇಕು. ಉಗ್ರರರಿಗೆ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ನಾಗರಾಜ ಷ ಹದ್ಲಿ, ಉಮೇಶ ಮೇಟಿ, ಚಂದ್ರಶೇಖರ ರಾಠೋಡ, ಎಸ್.ಎನ್.ರಾಂಪುರ, ಅಬ್ದುಲರಜÁಕ ಬೇಣೂರ, ಮುತ್ತು ಜೋಳದ, ಕುತುಬುದಿನ ಖಾಜಿ, ಇಮಾಮಸಾಬ ಬಳಬಟ್ಟಿ, ವೈ.ವೈ.ತಿಮ್ಮಾಪುರ, ವಿರೇಶ ಹುಂಡೆಕಾರ, ರೇಣುಕಾ ನ್ಯಾಮಗೌಡ, ಗಂಗೂಬಾಯಿ ಚವ್ಹಾಣ, ಶಂಕರ ನಾಯಕ, ರಮೇಶ ಬದ್ನೂರ, ಸಂಗಮೇಶ ದೊಡ್ಡಮನಿ ಇತರರು ಇದ್ದರು.