ಬಾಗಲಕೋಟೆ ನಗರದ ಬಿವಿವಿ ಸಂಘದ ವಾಣಿಜ್ಯ ಮಹಾವಿದ್ಯಾಲಯದ ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾಲೇಜಿನ ೨೦೨೪-೨೫ನೇ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಬಿವಿವಿ ಸಂಘದ ಆಡಾತಾಧಿಕಾರಿ ಡಾ.ವಿಜಯಕುಮಾರ ಕಟಗಿಹಳ್ಳಿಮಠ ಮಾತನಾಡಿದರು.  
ಜಿಲ್ಲೆ

ಉ-ಕ ವಿದ್ಯಾರ್ಥಿಗಳಲ್ಲಿ ಅದಮ್ಯ ಶಕ್ತಿ

ಬಾಗಲಕೋಟೆ: ಉತ್ತರ ಕರ್ನಾಟಕದ ವಿದ್ಯಾರ್ಥಿಗಳಲ್ಲಿ ಆದಮ್ಯ ಶಕ್ತಿ ಇದೆ, ಅದರ ಸದ್ಬಳಕೆ ಆಗುವ ಅನಿವಾರ್ಯತೆ ಇದೆ ಎಂದು ಬಿವಿವಿ ಸಂಘದ ಆಡಾತಾಧಿಕಾರಿ ಡಾ.ವಿಜಯಕುಮಾರ ಕಟಗಿಹಳ್ಳಿಮಠ ಹೇಳಿದರು.

ನಗರದ ಬಿವಿವಿ ಸಂಘದ ವಾಣಿಜ್ಯ ಮಹಾವಿದ್ಯಾಲಯದ ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾಲೇಜಿನ ೨೦೨೪-೨೫ನೇ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಭಾರತೀಯ ಸಂಸ್ಕೃತಿಯಲ್ಲಿ ಆಗಮನ ಮತ್ತು ನಿರ್ಗಮನಕ್ಕೆ ಬಹಳ ಮಹತ್ವವಿದೆ. ಉತ್ತರ ಕರ್ನಾಟಕ ವಿದ್ಯಾರ್ಥಿಗಳಿಗೆ ಆದಮ್ಯ ಶಕ್ತಿಯಿದ್ದು. ತಮ್ಮಲ್ಲಿನ ಪ್ರತಿಭೆಯನ್ನು ಅನಾವರಣಗೊಳಿಸಿ, ನಕಾರಾತ್ಮಕ ವಿಚಾರಗಳಿಂದ ದೂರವಿದ್ದು ಸಕಾರಾತ್ಮಕ ಭಾವನೆಗಳನ್ನು ಬೆಳಸಿಕೊಂಡು ಸಚಾರಿತ್ರ‍್ಯವಂತರಾಗಬೇಕು, ನಿಮ್ಮ ಭವಿಷ್ಯಕ್ಕೆ ನೀವೇ ನಿರ್ಮಾತೃಗಳು ಎಂದರು.

ಪ್ರಾಚಾರ್ಯ ಡಾ.ಜಗನ್ನಾಥ ಚವ್ಹಾಣ ಅಧ್ಯಕ್ಷತೆ ವಹಿಸಿದ್ದರು. ಐ.ಕ್ಯೂ.ಎ.ಸಿ ಸಂಯೋಜಕ ಗಿರಿಜಾ ನಾವದಿಗಿ, ಸಿಬ್ಬಂದಿ ಕಾರ್ಯದರ್ಶಿ ಡಾ.ಎಂ.ನಂಜುಂಡಸ್ವಾಮಿ, ಸಾಂಸ್ಕೃತಿಕ ಚಟುವಟಿಕೆಗಳ ವಿಭಾಗದ ಸಂಯೋಜಕ ಆರ್.ಪಿ.ಮೇಲಿನಮನಿ, ದೈಹಿಕ ನಿರ್ದೇಶಕ ಎಸ್.ಎಸ್.ಕೋಟ್ಯಾಳ, ವಿದ್ಯಾರ್ಥಿಗಳ ಪ್ರತಿನಿಽಯಾದ ವೈಷ್ಣವಿ ದೇಸಾಯಿ, ಪರೇಶ, ಕೀರ್ತಿ ಕಿತ್ತಲಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ರಾಜು ಮೇಲಿನಮನಿ ಸ್ವಾಗತಿಸಿದರು. ಡಾ.ಬಸವರಾಜ ವ್ಹಿ. ಖೋತ ಪರಿಚಯಿಸಿದರು. ಡಾ. ಎಂ.ಎಂ.ಹುದ್ದಾರ ವರದಿ ವಾಚನ ಮಾಡಿದರು. ಡಾ.ಎಸ್.ಎಸ್.ಕೋಟ್ಯಾಳ ವಂದಿಸಿದರು. ಗೌರಮ್ಮ ಕೆಂಗಲಗುತ್ತಿ ಕಾರ್ಯಕ್ರಮ ನಿರೂಪಿಸಿದರು.