ಜಿಲ್ಲೆ

ಉ.ಕ.ಜಿಲ್ಲೆಯಲ್ಲಿ 40 ಜನರಿಗೆ ಕರೊನಾ

ಕಾರವಾರ: ಜಿಲ್ಲೆಯ 40 ಜನರಿಗೆ ಕರೊನಾ ಇರುವುದು ಸೋಮವಾರ ಖಚಿತವಾಗಿದೆ. 246 ಜನ ಗುಣವಾಗಿದ್ದಾರೆ. ಒಂದು ಸಾವು ಸಂಭವಿಸಿದೆ. ಕಾರವಾರ, ಹಳಿಯಾಳದಲ್ಲಿ ತಲಾ 3, ಹೊನ್ನಾವರದಲ್ಲಿ 18, ಶಿರಸಿಯಲ್ಲಿ 10, ಕುಮಟಾದಲ್ಲಿ 9, ಜೊಯಿಡಾ ಹಾಗೂ ಯಲ್ಲಾಪುರದಲ್ಲಿ ತಲಾ ಒಬ್ಬರಿಗೆ ಕರೊನಾ ಸೋಂಕು ಇರುವುದು ಖಚಿತವಾಗಿದೆ. ಕಾರವಾರದಲ್ಲಿ 9, ಕುಮಟಾದ 4, ಹೊನ್ನಾವರದ 5, ಹಳಿಯಾಳದ 3, ಮುಂಡಗೋಡಿನ 225 ಜನರು ಗುಣವಾಗಿದ್ದಾರೆ. ಹಳಿಯಾಳದಲ್ಲಿ ಕರೊನಾದಿಂದ ಒಂದು ಸಾವು ಸಂಭವಿಸಿದೆ. ಜಿಲ್ಲೆಯ ಒಟ್ಟಾರೆ ಸೋಂಕಿತರ ಸಂಖ್ಯೆ 13020 ಕ್ಕೆ ಏರಿಕೆಯಾಗಿದ್ದು, 12226 ಜನ ಗುಣವಾಗಿ ಬಿಡುಗಡೆಯಾಗಿದ್ದಾರೆ. 165 ಜನ ಸಾವನ್ನಪ್ಪಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 629 ಕ್ಕೆ ಇಳಿಕೆಯಾಗಿದೆ.

ಕರೊನಾ ಸೋಂಕಿತರ ಸಂಖ್ಯೆ ಇಳಿಮುಖ
ಯಲ್ಲಾಪುರ
: ಕರೊನಾ ಸೋಂಕಿತರ ಸಂಖ್ಯೆ ತಾಲೂಕಿನಲ್ಲಿ 15 ದಿನಗಳಿಂದ ಇಳಿಮುಖವಾಗುತ್ತಿದೆ. ನಿತ್ಯ ಸರಾಸರಿ 1-2 ಪ್ರಕರಣ ಮಾತ್ರ ಕಂಡುಬರುತ್ತಿವೆ. ಜನತೆ ನಿರ್ಲಕ್ಷ್ಯಂದ ಮೈಮರೆಯಬಾರದೆಂಬ ಉದ್ದೇಶದಿಂದ ಆರೋಗ್ಯ ಇಲಾಖೆ ಸಾರ್ವಜನಿಕ ಸ್ಥಳಗಳಲ್ಲಿ ತಪಾಸಣೆ ಕಾರ್ಯ ಮುಂದುವರಿಸಿದೆ. ತಾಲೂಕಾಸ್ಪತ್ರೆ, ಯಲ್ಲಾಪುರ ಬಸ್ ನಿಲ್ದಾಣ, ಅರಬೈಲ, ಗುಳ್ಳಾಪುರದಲ್ಲಿ 100ಕ್ಕೂ ಹೆಚ್ಚು ಜನರನ್ನು ಕೋವಿಡ್-19 ತಪಾಸಣೆಗೆ ಒಳಪಡಿಸಲಾಗಿದೆ. ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಕೆ ಮತ್ತಿತರ ನಿಯಮಗಳನ್ನು ಪಾಲಿಸಬೇಕು. ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ. ಸೋಂಕು ತೊಲಗಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ತಾಲೂಕಾಡಳಿತ ವಿನಂತಿಸಿದೆ.