ಜಿಲ್ಲೆ

ಉ.ಕ. ಜಿಲ್ಲೆಯಲ್ಲಿ 21 ಜನರಿಗೆ ಕರೊನಾ

ಕಾರವಾರ: ಮಂಗಳವಾರದ ವರದಿಯಂತೆ ಜಿಲ್ಲೆಯ 21 ಜನರಿಗೆ ಕರೊನಾ ಪತ್ತೆಯಾಗಿದೆ. ಕಾರವಾರ, ಕುಮಟಾ, ಭಟ್ಕಳ, ಯಲ್ಲಾಪುರದಲ್ಲಿ ತಲಾ 3, ಶಿರಸಿ ಮತ್ತು ಮುಂಡಗೋಡಿನಲ್ಲಿ ತಲಾ 1, ಅಂಕೋಲಾದಲ್ಲಿ 7 ಜನರಿಗೆ ಸೋಂಕು ಇರುವುದು ಖಚಿತವಾಗಿದೆ. ಕಾರವಾರ, ಕುಮಟಾದಲ್ಲಿ ತಲಾ 8, ಅಂಕೋಲಾ, ಹೊನ್ನಾವರ, ಸಿದ್ದಾಪುರ ಹಾಗೂ ಹಳಿಯಾಳದಲ್ಲಿ ತಲಾ 1, ಮುಂಡಗೋಡಿನಲ್ಲಿ 39 ಜನ ಸೇರಿ ಒಟ್ಟು 59 ಜನ ಗುಣವಾಗಿದ್ದಾರೆ.