ಜಿಲ್ಲೆ

ಈಶಾನ್ಯ ಪದವೀಧರರ ಕ್ಷೇತ್ರಕ್ಕೆ 29 ಅಭ್ಯರ್ಥಿಗಳಿಂದ ನಾಮಪತ್ರ

ಕಲಬುರಗಿ: ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಜೂನ್ ೩ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕೊನೆ ದಿನ ಗುರುವಾರ ೨೦ ಅಭ್ಯರ್ಥಿಗಳಿಂದ ೨೪ ನಾಮಪತ್ರ ಸಲ್ಲಿಸಿದ್ದು, ಒಟ್ಟು ಇದುವರೆಗೆ ೨೯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ, ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ ತಿಳಿಸಿz್ದÁರೆ.
ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್, ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ಬಸವರಾಜ, ಸ್ವತಂತ್ರ ಅಭ್ಯರ್ಥಿಗಳಾಗಿ ತೇಜಸ್‌ಕುಮಾರ, ಸುರೇಶ ಆರ್., ಪ್ರಭು ನಾರಾಯಣ, ಬಸವರಾಜ ದುರ್ಗಪ್ಪ ಮ್ಯಾಗಲಮನಿ, ಮಹ್ಮದ್ ಹುಸೇನ್, ಎನ್.ಪ್ರತಾಪ ರೆಡ್ಡಿ, ರಾಜು ದೇವಪ್ಪ, ರಿಯಾಜ್ ಅಹ್ಮದ್, ಸತೀಶಕುಮಾರ, ಸಾಯಿನಾಥ ನಾಗೇಶ್ವರ, ಸುನೀಲಕುಮಾರ ಹೈದ್ರಪ್ಪ, ಅನಿಮೇಶ ಮಹಾರುದ್ರಪ್ಪ, ವಿಲಾಸ ಮಾರುತಿ, ಶರಣಬಸಪ್ಪ ಶ್ರೀಮಂತಪ್ಪ, ಸುರೇಶ ದೇವಿಂದ್ರಪ್ಪ, ಸತೀಶಕುಮಾರ ಅಮೃತ ಹಾಗೂ ಶಿವಕುಮಾರ ಸ್ವಾಮಿ ನಾಮಪತ್ರ ಸಲ್ಲಿಸಿದ್ದಾರೆ.
ಇದುವರೆಗೆ ೨೯ ಅಭ್ಯರ್ಥಿಗಳಿಂದ ೪೧ ನಾಮಪತ್ರ ಸಲ್ಲಿಸಿದಂತಾಗಿದೆ. ಮೇ ೧೭ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರಗಳನ್ನು ಹಿಂಪಡೆಯುವ ಕೊನೆಯ ದಿನ ಮೇ ೨೦ ಇರುತ್ತದೆ.