ಜಿಲ್ಲೆ

ಈರುಳಿ ಕೆಜಿಗೆ ಬರಿ ಒಂದೂ ರೂಪಾಯಿ

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ

ಜಿಲ್ಲೆಯಲ್ಲಿ ಈರುಳ್ಳಿ ಕಟಾವು ನಡೆದಿದ್ದು, ಬೆಲೆ ಕುಸಿತದಿಂದ ಬೆಳೆಗಾರರು ಕಂಗಾಲಾಗಿದ್ದಾರೆ. 50 ಕೆ.ಜಿ ಚೀಲಕ್ಕೆ 50 ರೂ.ಗೆ ಮಾರಾಟ ಆಗುತ್ತಿದ್ದು, ರೈತರನ್ನು ನಷ್ಟಕ್ಕೆ ದೂಡಿದೆ.

ಈರುಳ್ಳಿ ಮಧ್ಯ ಕರ್ನಾಟಕ ಭಾಗದ ಪ್ರಮುಖ ವಾಣಿಜ್ಯ ಬೆಳೆ. ಉತ್ತಮ ದರ ದೊರೆತು, ಗಣೇಶ ಹಬ್ಬದ ಸಂಭ್ರಮ ಇಮ್ಮಡಿಗೊಳಿಸುತ್ತದೆ ಎಂಬ ರೈತರ ನಂಬಿಕೆ ದರ ಕುಸಿತದಿಂದಾಗಿ ಹುಸಿಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಪ್ರತಿ ಚೀಲಕ್ಕೆ 1,600 ರಿಂದ 3,450ರ ವರೆಗೆ ದರ ಸಿಕ್ಕಿತ್ತು. ಈ ಬಾರಿ ಪ್ರತಿ ಕೆ.ಜಿ ಕೇವಲ 1 ರಿಂದ 5ರ ವರೆಗೆ ಮಾರಾಟವಾಗುತ್ತಿದೆ.

ಜಿಲ್ಲೆಯಲ್ಲಿ ಈ ಹಂಗಮಿನಲ್ಲಿ 5331 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ಸ್ಥಳೀಯವಾಗಿ ಬೇಡಿಕೆ ತಗ್ಗಿದ್ದು, ರೈತರು ಬಾಡಿಗೆ ವಾಹನದಲ್ಲಿ ಬೆಂಗಳೂರು ಮಾರುಕಟ್ಟೆಗೆ ಸಾಗಿಸುತ್ತಿದ್ದಾರೆ. ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ 4 ಕೆ.ಜಿ ಈರುಳ್ಳಿಗೆ 100 ದರವಿದೆ. ಸೂಪರ್ ಮಾರುಕಟ್ಟೆಗಳಲ್ಲಿ ಕೆ.ಜಿ.ಗೆ 35ರಂತೆ ಮಾರಾಟವಾಗುತ್ತಿದೆ. ಬ್ಯಾಗ್ ಈರುಳ್ಳಿ ಬೆಳೆಯಲು 800 ರೂ. ಖರ್ಚಾಗುತ್ತದೆ. ಸಾಗಣೆ ವೆಚ್ಚ ಸೇರಿ ಒಂದು ಸಾವಿರಕ್ಕಿಂತಲೂ ಹೆಚ್ಚು ಖರ್ಚಾಗುತ್ತದೆ. ಇದರಲ್ಲಿ ಅರ್ಧ ದರವೂ ಸಿಗದಿದ್ದರೆ ಜೀವನ ನಡೆಸುವುದು ಹೇಗೆ? ಎಂದು ಕೊಟ್ಟೂರು ಆಲೂರು ಗ್ರಾಮದ ರೈತ ಕೊಚ್ಚಲಿ ಮಂಜುನಾಥ ಪ್ರಶ್ನಿಸಿದರು.

ಮಳೆ ತಂದ ಸಂಕಷ್ಟ

ಒAದು ತಿಂಗಳಿAದ ಸುರಿಯುತ್ತಿರುವ ಮಳೆಯಿಂದಾಗಿ ಕಟಾವು ಹಂತಕ್ಕೆ ಬಂದಿದ್ದ ಈರುಳ್ಳಿ ಗುಣಮಟ್ಟ ಹಾಳಾಗಿದೆ. ಕಳೆದ ವಾರ ಸುರಿದ ಭಾರಿ ಮಳೆಗೆ ಅಪಾರ ಪ್ರಮಾಣದ ಈರುಳ್ಳಿ ನಾಶವಾಗಿದೆ. ಮಳೆಯಿಂದಾಗಿ ಸ್ಥಳೀಯ ಈರುಳ್ಳಿಯ ಗುಣಮಟ್ಟ, ಬಣ್ಣ ಹಾಳಾಗಿದೆ. ವರ್ತಕರು ಸ್ಥಳೀಯ ಈರುಳ್ಳಿ ನಿರಾಕರಿಸಿ ಮಹಾರಾಷ್ಟ್ರದಿಂದ ಬಂದಿರುವ ಈರುಳ್ಳಿ ಖರೀದಿಸುತ್ತಿದ್ದಾರೆ. ನಷ್ಟ ನಮ್ಮ ಬೆನ್ನುಹತ್ತಿದೆ ಎಂದು ರೈತರ ಅಳಲಾಗಿದೆ.

ಸಾಲಗಾರನಾದ ರೈತ

ಜಿಲ್ಲೆಯಲ್ಲಿ ಅಂದಾಜು 5331 ಹೆಕ್ಟೇರ್ ಪ್ರದೇಶದಲ್ಲಿ ರೈತರು ಈರುಳಿ ಬೆಳೆದಿದ್ದಾರೆ. ಅದರಂತೆ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ಕೊಟ್ಟೂರು ತಾಲೂಕಿನ ಅಲ್ಬೂರು ಗ್ರಾಮದ ರೈತ ಕೊಚ್ಚಾಲಿ ಮಂಜುನಾಥನ ಸುಮಾರು 9 ಎಕರೆ ಹೊಲದಲ್ಲಿ ಎಂಟರಿAದ ಒಂಬತ್ತು ಲಕ್ಷ್ಯ ಖರ್ಚುಮಾಡಿ ಈರುಳ್ಳಿ ಬೆಳೆ ಬೆಳೆದಿದ್ದರು. ಕಟಾವು ಮಾಡಿ ಈರುಳ್ಳಿ ಮಾರಾಟ ಮಾಡಬೇಕು ಎನ್ನುವಷ್ಟರಲ್ಲಿ ಈರುಳ್ಳಿ ಬೆಲೆ ಧಿಡೀರನೇ ಪಾತಾಳಕ್ಕೆ ಇಳಿದಿದೆ. ಗುಣಮಟ್ಟದ ಈರುಳಿ ಇದ್ದರೂ, 50 ಕೆಜಿ ಚೀಲಕ್ಕೆ ಕೇವಲ 50 ರೂ.ಗೆ ಕೇಳುತ್ತಿದ್ದಾರೆ. ಈರುಳ್ಳಿ ಬೆಳೆ ಬೆಳೆದು ರೈತರು ಸಾಲಗಾರರಾದರು. ಇತ್ತ ಖರೀದಿ ಕೇಂದ್ರವಿಲ್ಲದೆ, ಬೆಂಬಲ ಬೆಲೆ ಇಲ್ಲದೆ ನಮ್ಮ ಬದುಕು ಬೀದಿಗೆ ಬಂದಿದೆ. ರಾಜ್ಯ ಸರ್ಕಾರ ಈ ಕೂಡಲೆ ಈರುಳಿ ಬೆಳೆಗಾರರ ಸಂಕಷ್ಟಕ್ಕೆ ಧಾವಿಸಬೇಕು ಎಂದು ಆಗ್ರಹವಾಗಿದೆ.

ಖರೀದಿ ಕೇಂದ್ರಕ್ಕೆ ಒತ್ತಾಯ

ಬೆಂಬಲ ಬೆಲೆಯಡಿ ಈರುಳ್ಳಿ ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯಿಸಿ ರೈತರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ. ವಿಜಯನಗರ ಜಿಲ್ಲೆಯಲ್ಲಿ ರೈತರು ಕೃಷಿಯಿಂದಲೇ ಜೀವನ ನಡೆಸುತ್ತಿದ್ದಾರೆ. ನೂರಾರು ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದಾರೆ. ಈಗಾಗಲೇ ಕಟಾವು ಮಾಡಿ ಈರುಳ್ಳಿ ಸಂಗ್ರಹಿಸಲಾಗಿದೆ. ಆದರೆ, ಬೆಲೆ ಕುಸಿತ ಕಂಡಿರುವುದು ರೈತರಿಗೆ ಆತಂಕ ತಂದಿದೆ. ರಾಜ್ಯ ಸರ್ಕಾರ ಪಟ್ಟಣದಲ್ಲಿ ಬೆಂಬಲ ಬೆಲೆಯಡಿ ಈರುಳ್ಳಿ ಖರೀದಿ ಕೇಂದ್ರ ತೆರೆಯಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಈರುಳಿ ಬೆಲೆ ಕುಸಿದಿದೆ. ರೈತರು ಸಾಗಿಸುವ ವೆಚ್ಚ ಕೂಡ ಬಾರದ ರೀತಿಯಲ್ಲಿ ಬೆಲೆ ಇಳಿದಿದೆ. ರಾಜ್ಯ ಸರ್ಕಾರ ರೈತರ ಅನುಕೂಲಕ್ಕಾಗಿ ಖರೀದಿ ಕೇಂದ್ರ ತೆರಬೇಕು. ರೈತರಿಗೆ ಆಶ್ರಯ ನೀಡಬೇಕು. - ಸಿದ್ದಪ್ಪ ಉತ್ತಂಗಿ, ರಾಜ್ಯಧ್ಯಕ್ಷ, ಈರುಳಿ ಬೆಳೆಗಾರರ ಸಂಘ ಈ ಬಾರಿ ಉತ್ತಮ ಮಳೆಯಾಗಿ, 10 ಲಕ್ಷ್ಯ ಖರ್ಚುಮಾಡಿ 9 ಎಕರೆಯಲ್ಲಿ ಈರುಳಿ ಬೆಳೆದು ಲಾಭದ ನಿರೀಕ್ಷೆಯಲ್ಲಿದೆ. ಕಟಾವು ಮಾಡಿ ಈರುಳ್ಳಿ ಮಾರಾಟ ಮಾಡಬೇಕು ಎನ್ನುವಷ್ಟರಲ್ಲಿ ಬೆಲೆ ಪಾತಳಕ್ಕೆ ಇಳಿದಿದೆ. ಈಗ ಸಾಲಗಾರನಾದೆ. - ಕೊಚ್ಚಾಲಿ ಮಂಜುನಾಥ, ರೈತ, ಅಲ್ಬೂರು, ಕೊಟ್ಟೂರು