ಬಸವಕಲ್ಯಾಣ: ಈದ್ ಮಿಲಾದ್ ಹಬ್ಬದ ನಿಮಿತ್ತ ನಗರದಲ್ಲಿ ಶನಿವಾರ ಬೃಹತ್ ಮೆರವಣಿಗೆ ಜರುಗಿತು. ರಾಜಾ ಬಾಗ್ ಸವಾರ್ ದರ್ಗಾದ ಮುತ್ತವಲ್ಲಿ ಹಜರತ್ ಖಾಜಾ ಜಿಯಾಉಲ್ ಹಸನ್ ಜಾಗೀರದಾರ್ ನೇತೃತ್ವದಲ್ಲಿ ಕೋಟೆಯಿಂದ ಮುಖ್ಯ ರಸ್ತೆ ಮಾರ್ಗವಾಗಿ ಗಾಂಧಿ ವೃತ್ತದ ವರೆಗೆ ಮೆರವಣಿಗೆ ಜರುಗಿತು.
ಮೆರವಣಿಗೆಯುದ್ದಕ್ಕೂ ಹಸಿರು ಧ್ವಜಗಳು ಹಾರಾಡಿದವು. ನಗರದ ಸೇರಿ ವಿವಿಧೆಡೆಯಿಂದ ಆಗಮಿಸಿದ ಅಪಾರ ಸಂಖ್ಯೆಯ ಮುಸ್ಲಿಮರು ಭಾಗವಹಿಸಿದ್ದರು.
ಪ್ರಮುಖರಾದ ಖುರ್ಷಿದ್ ಅಲಿ ಸಾಹೇಬ್, ಹಮೀದ್ ಪಾಶಾ ಖಾದ್ರಿ, ನಗರಸಭೆ ಮಾಜಿ ಅಧ್ಯಕ್ಷ ಮೀರ ಅಜರಲಿ ನವರಂಗ್, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಮಾಜಿ ಎಂಎಲ್ಸಿ ವಿಜಯಸಿಂಗ್, ಮುಖಂಡರಾದ ಮಾಲಾ ಬಿ.ನಾರಾಯಣರಾವ, ಧನರಾಜ ತಾಳಂಪಳ್ಳಿ, ನ್ಯಾಯವಾದಿ ಮೀರ ಅಮಾನತ್ ಅಲಿ, ಅಮೀರೋದ್ದಿನ್ ಚೌದರಿ, ಮಿಸ್ಬಾ ಉಲ್ಲ್ ಹಸನ್, ಡಾ.ಖದೀರೋದ್ದಿನ್, ರಾಯಿಸೋದ್ದಿನ್ ಇತರರಿದ್ದರು.
ಮಧ್ಯಾಹ್ನ ೨ರ ಸುಮಾರಿಗೆ ಕೋಟೆಯಿಂದ ಆರಂಭವಾದ ಮೆರವಣಿಗೆ ಗಾಂಧಿ ವೃತ್ತ ತಲುಪಿದ ನಂತರ ಇಲ್ಲಿ ಬೃಹತ್ ಬಹಿರಂಗ ಸಮಾವೇಶದೊಂದಿಗೆ ಮುಕ್ತಾಯವಾಯಿತು.