ಗೋಣಿಕೊಪ್ಪ: ಶಾಫಿ ಮುಸ್ಲೀಂ ಜಮಾ-ಅತ್ ವತಿಯಿಂದ ಶನಿವಾರ ಈದ್ ಮಿಲಾದ್ ಸಂದೇಶ ಮೆರವಣಿಗೆ ಗೋಣಿಕೊಪ್ಪದಲ್ಲಿ ನೆರವೇರಿತು. ಎಸ್‌ಎಂಜೆ ಮಿಲಾದ್ ಫೆಸ್ಟ್ ಹೆಸರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯದವರು ಪಾಲ್ಗೊಂಡು ಸಂಭ್ರಮಿಸಿದರು.
ಆರ್‌ಎಂಸಿ ಆವರಣದಿಂದ ಮೆರವಣಿಗೆ ಮೂಲಕ ಆಗಮಿಸಿ ಬಸ್ ನಿಲ್ದಾಣದ ಎದುರು ಜಮಾಯಿಸಿದರು. ಮೂರು ಜನರು ಜತೆಯಲ್ಲಿರುವಾಗ ಒಬ್ಬನನ್ನು ಬಿಟ್ಟು ಗುಟ್ಟು ಮಾತನಾಡದಿರಿ ಎಂಬ ಸಂದೇಶ ನೀಡಲಾಯಿತು. ಮಕ್ಕಳು ಕೂಡ ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.
ಮಹಿಳೆಯರು ಪಟ್ಟಣದುದ್ದಕ್ಕೂ ಕಾದು ಸ್ವಾಗತಿಸಿದರು.
ಮುಸ್ಲಿಂ ವರ್ತಕರು ಅಂಗಡಿ-ಮುಂಗಟ್ಟು ಮುಚ್ಚಿ ಆಚರಣೆಗೆ ಗೌರವ ಸೂಚಿಸಿದರು.
ಕೊಡಗು ಇಂಟರ್‌ನ್ಯಾಷನಲ್ ಸಭಾಂಗಣದಲ್ಲಿ ಪಾಲ್ಗೊಂಡು ಪ್ರವಾದಿ ಮೊಹಮದ್ ಪೈಗಂಬರ್ ಸಂದೇಶ ನೀಡಿದರು.