ವಿಜಯವಾಣಿ ಸುದ್ದಿಜಾಲ ಕಲಬುರಗಿ
ಈದ್ ಮಿಲಾದ್ ಹಬ್ಬದ ಅಂಗವಾಗಿ ಶುಕ್ರವಾರ ಸಂಜೆಯಿAದ ತಡರಾತ್ರಿಯವರೆಗೂ ನಗರದಲ್ಲಿ ಮುಸ್ಲಿಂ ಬಾಂಧವರು ಮೆಕ್ಕಾ, ಮದಿನಾ ಪ್ರತಿಕೃತಿಗಳೊಂದಿಗೆ ದೀಪಾಲಂಕಾರ ಮಾಡಿಕೊಂಡು ಜೋರ‍್ದಾರ್ ಆಗಿ ವರ್ಣರಂಜಿತ ಮೆರವಣಿಗೆ (ಜೂಲುಸ್)ನಡೆಸಿದರು.
ಪ್ರವಾದಿ ಮಹ್ಮದ್‌ರ ಜನ್ಮ ದಿನ ಅಂಗವಾಗಿ ಈದ್ ಮಿಲಾದ್ ಹಬ್ಬವನ್ನು ಗುರುವಾರ ಕಲಬುರಗಿ ನಗರ ಮತ್ತು ಜಿಲ್ಲೆಯ ಎಲ್ಲಡೆ ಆಚರಿಸಲಾಯಿತು. ನಗರದ ದರ್ಗಾ ಪ್ರದೇಶದಲ್ಲಿ ಕೆಲವಡೆ ಸಣ್ಣ ಪ್ರಮಾಣದ ದೇವರ ಮೆರವಣಿಗೆಗಳನ್ನು ಯುವಕರು ನಡೆಸಿದ್ದರು. ಬೃಹತ್ ಪ್ರಮಾಣದಲ್ಲಿ ನಡೆಸುವ ಜಾಂಕಿ ಮೆರವಣಿಗೆಯನ್ನು ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಗುರುವಾರ ಕೈಬಿಟ್ಟು, ಶುಕ್ರವಾರ ನಡೆಸಲು ಮೊದಲೇ ಜರುಗಿದ ಸಭೆಯಲ್ಲಿ ಮುಸ್ಲಿಂರು ನಿರ್ಧರಿಸಿದ್ದರು.
ಅದರಂತೆ ಶುಕ್ರವಾರ ಸಂಜೆಯಿAದಲೇ ನಗರದ ವಿವಿಧ ಕಡೆಗಳಲ್ಲಿರುವ ಮುಸ್ಲಿಂ ಬಡಾವಣೆಗಳಿಂದ ಮೆಕ್ಕಾ ಮದಿನಾ ಪ್ರತಿಕೃತಿಗಳನ್ನು ನಿರ್ಮಿಸಿಕೊಂಡು ಅದಕ್ಕೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಿ ವಾಹನಗಳಲ್ಲಿ ಇರಿಸಿಕೊಂಡು, ವಾಧ್ಯಗಳೊಂದಿಗೆ ಮೆರವಣಿಗೆ ಹೊರಟರು. ಎಲ್ಲ ಗಲ್ಲಿಗಳಿಂದ ಆಗಮಿಸಿದ್ದ ಸಣ್ಣ ಸಣ್ಣ ಮೆರವಣಿಗೆಗಳೆಲ್ಲವೂ ಮುಸ್ಲಿಂ ಚೌಕ್‌ದಲ್ಲಿ ಜಮಾಗೊಂಡವು.
ಎಲ್ಲಡೆಯಿAದ ಮೆರವಣಿಗೆಗಳು ಆಗಮಿಸಿದ ನಂತರ ಸಂಜೆ ೭-೩೦ ಗಂಟೆ ಸುಮಾರಿಗೆ ಮುಸ್ಲಿಂ ಚೌಕ್‌ದಲ್ಲಿ ಜರುಗಿದ ಸಮಾರಂಭದಲ್ಲಿ ಬೃಹತ್ ಮೆರವಣಿಗೆಗೆ ಕೆಬಿಎನ್ ದರ್ಗಾದ ಸೈಯದ್ ಮಹ್ಮದ್ ಅಲಿ ಅಲ್ ಹುಸೇನಿ ಮತ್ತು ಕಾಂಗ್ರೆಸ್ ಯುವ ಮುಖಂಡ ಫರಾಜುಲ್ ಇಸ್ಲಾಂ ಹಸಿರು ಧ್ವಜ ತೋರಿಸುವ ಮೂಲಕ ಚಾಲನೆ ನೀಡಿದರು. ಅಬ್ದುಲ್ ರೆಹಮಾನÀ ಮಿರ್ಚಿ, ವಾಹಜ್ ಬಾಬಾ, ಲಾಲ್ ಅಹ್ಮದ್, ಸೈಯದ್ ಅಹ್ಮದ್, ಉಸ್ತಾದ್ ನಾಸೀರ್ ಹುಸೇನ್ ಸೇರಿದಂತೆ ಅನೇಕ ಗಣ್ಯರು ಸಾಕ್ಷಿಯಾದರು.
ಈ ವೇಳೆಯಲ್ಲಿ ಕೆಬಿಎನ್ ದರ್ಗಾದ ಸೈಯದ್ ಮಹ್ಮದ್ ಅಲಿ ಅಲ್ ಹುಸೇನಿ ಇತರರು ಸಂದೇಶ ನೀಡಿ, ದೇವರ ಕಾರ್ಯವನ್ನು ಎಲ್ಲರು ಶ್ರದ್ಧೆಯಿಂದ ಮಾಡುವ ಮೂಲಕ ಸಾಧ್ಯವಾದಷ್ಟು ಎಲ್ಲರಿಗೂ ಒಳ್ಳೆಯದನ್ನು ಮಾಡೋಣ ಎಂದರು.
ಮುಸ್ಲಿA ಚೌಕ್‌ನಿಂದ ಶುರುವಾದ ಮೆರವಣಿಗೆಯು ನೆಹರು ಗಂಜ್, ಬಂಬೂ ಬಜಾರ, ಹುಮನಾಬಾದ ಬೇಸ್, ಕಿರಾಣಾ ಬಜಾರ, ಚೌಕ್ ವೃತ್ತ, ಸೂಪರ್ ಮಾರ್ಕೇಟ್, ಗಣೇಶ ಮಂದಿರ ಮಾರ್ಗವಾಗಿ ನ್ಯಾಷನಲ್ ಗ್ರೌಂಡ್‌ಗೆ ಆಗಮಿಸಿ ರಾತ್ರಿ ಮೆರವಣಿಗೆ ಸಮಾವೇಶಗೊಂಡಿತು. ಸಮಾಜದ ಮುಖಂಡರು ಮಾತನಾಡಿದರು. ಸಾವಿರಾರು ಜನರು ಪಾಲ್ಗೊಂಡಿದ್ದರು.