ಜಿಲ್ಲೆ

ಈಡಿಗ ಸಮುದಾಯಕ್ಕೆ ಅನ್ಯಾಯ

ಕಲಬುರಗಿ: ರಾಜ್ಯ ರ‍್ಕಾರ ಜಾತಿ ಗಣತಿ ಅಂಗೀಕರಿಸಲು ಸಿದ್ಧತೆ ನಡೆಸುತ್ತಿದ್ದು, ಈಡಿಗ ಬಿಲ್ಲವ ನಾಮಧಾರಿ ಸೇರಿ ೨೬ ಪಂಗಡಗಳಿಗೆ ಅಂಕಿ ಅಂಶದಲ್ಲಿ ಅನ್ಯಾಯ ಮಾಡಲಾಗಿದೆ ಎಂದು ಕಲ್ಯಾಣ ರ‍್ನಾಟಕ ಹೋರಾಟ ಸಮಿತಿ ಪ್ರಧಾನ ಕರ‍್ಯರ‍್ಶಿ ವೆಂಕಟೇಶ ಕಡೇಚೂರ್​ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ರಾಜ್ಯ ರ‍್ಕಾರ ಕಾಂತರಾಜು ವರದಿ ಮತ್ತು ಜಯಪ್ರಕಾಶ ಹೆಗಡೆ ನೇತೃತ್ವದ ಸಮಿತಿ ವರದಿಯಲ್ಲಿ ಈಡಿಗ, ಬಿಲ್ಲವ, ನಾಮಧಾರಿ ಸೇರಿ ೨೬ ಪಂಗಡಗಳಲ್ಲಿ ೧೪ ಲಕ್ಷ ಜನಸಂಖ್ಯೆ ಇದೆ ಎಂದು ನಮೂದಿಸಿರುವುದು ಖಂಡನೀಯ. ರಾಜ್ಯದಲ್ಲಿ ಸುಮಾರು ೫೦ ಲಕ್ಷ ಜನಸಂಖ್ಯೆ ಇದ್ದು, ಎರಡು ಆಯೋಗಗಳು ಸಮುದಾಯದ ಜನರ ಮನೆ ಮನೆಗೆ ಭೇಟಿ ನೀಡದೆ ಸಿದ್ಧಪಡಿಸಿದ ವರದಿ ವೈಜ್ಞಾನಿಕವಾಗಿ ಇಲ್ಲ ಎಂದು ಪ್ರಕಟಣೆಯಲ್ಲಿ ಆೇಪ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಅತ್ಯಧಿಕ ಬಿಲ್ಲವ, ಈಡಿಗ, ನಾಮಧಾರಿ ನಾಯಕ ಸಮುದಾಯದ ಜನರು ದಕ್ಷಿಣ ಕನ್ನಡ, ಉಡುಪಿ ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಸುಮಾರು ೩೦ ಲದಷ್ಟಿದ್ದಾರೆ. ಬಾಕಿ ೨೮ ಜಿಲ್ಲೆಗಳಲ್ಲಿ ಕನಿಷ್ಠ ೨೦ರಿಂದ ೨೫ ಲಕ್ಷದಷ್ಟು ಸಮುದಾಯದ ಜನರಿದ್ದು, ರ‍್ಕಾರ ಪ್ರಕಟಿಸಿದ ಅಂಕಿ ಅಂಶ ಅವೈಜ್ಞಾನಿಕವಾಗಿದೆ. ಇದನ್ನು ತಿರಸರಿಸಿ, ವೈಜ್ಞಾನಿಕ ಸಮೀೆ ನಡೆಸಿ, ವರದಿ ಪಡೆದು ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈಡಿಗ ಸಮಾಜವನ್ನು ಸೌಲಭ್ಯದಿಂದ ವಂಚಿತ ಮಾಡುವ ಹುನ್ನಾರ ನಡೆದಿದೆ. ರ‍್ಕಾರವು ಅಂಕಿ ಅಂಶ ತಿದ್ದುಪಡಿ ಮಾಡದೆ ಸಮುದಾಯಕ್ಕೆ ನ್ಯಾಯ ಒದಗಿಸದಿದ್ದರೆ ಕಲ್ಯಾಣ ರ‍್ನಾಟಕ ರ‍್ಯ ಈಡಿಗ ಹೋರಾಟ ಸಮಿತಿ ಬೀದಿಗಿಳಿದು ಹೋರಾಟ ಮಾಡಲು ಶೀಘ್ರ ಸಭೆ ಸೇರಿ ನರ‍್ಧಾರ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

===

ಚಿತ್ರ: ೨೦೦೪ ಕೆಎಲ್​ಬಿ ೦೬

ಕಲಬುರಗಿಯಲ್ಲಿ ರ‍್ಪಡಿಸಿದ್ದ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿಲ್ಲಾಧಿಕಾರಿ ಬಿ.ೌಜಿಯಾ ತರನ್ನುಮ್​ ಮಾತನಾಡಿದರು. ಎಡಿಸಿ ರಾಯಪ್ಪ ಹುಣಸಗಿ, ಎಸಿ ಸಾಹಿತ್ಯ ಇತರರಿದ್ದರು.