ಬಳ್ಳಾರಿ ; ಬೆಂಗಳೂರಿನಲ್ಲಿ ನಡೆದ 25ನೇ ರಾಜ್ಯಮಟ್ಟದ ಮಾಸ್ಟರ್ಸ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬಳ್ಳಾರಿಯ ರಜನಿ ಲಕ್ಕ ಅವರಿಗೆ ಆರು ಚಿನ್ನ, ಒಂದು ಬೆಳ್ಳಿ ಪದಕ ಸೇರಿ 7 ಪದಕಗಳನ್ನು ಗೆದ್ದು ಮುಡಿಗೇರಿಸಿಕೊಂಡಿದ್ದಾರೆ.
ಚಾಂಪಿಯನ್ ಶಿಪ್‌ನಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸ್ಫರ್ಧಾಳುಗಳು ಭಾಗವಹಿಸಿದ್ದರು. ಜಿಲ್ಲೆಯನ್ನು ಪ್ರತಿನಿಧಿಸಿ ರಜನಿ ಲಕ್ಕ ಅವರು ಆಯ್ಕೆಯಾಗಿದ್ದರು. ಈಜು ಸ್ಪರ್ಧೆಯಲ್ಲಿ 100 ಮೀ. ಬ್ಯಾಕ್ ಸ್ಟೊಕ್, 200 ಮೀ. ಐಎಂ, 50 ಮೀ. ಫ್ರೀ ಸ್ಟೇಬಲ್, 50 ಮೀ. ಬಟ್ಟರ್ ಫ್ಲೈ, 4*50 ಫ್ರೀ ರಿಲೇ ವಿಭಾಗಗಳಲ್ಲಿ ಭಾಗವಹಿಸಿ, ಪ್ರಥಮ ಸ್ಥಾನ ಪಡೆದುಕೊಂಡು 6 ಚಿನ್ನ, 1 ಬೆಳ್ಳಿ ಪದಕ ಹಾಗೂ ಪ್ರಶಸ್ತಿ ಪ್ರಮಾಣ ಪತ್ರ ತಮ್ಮದಾಗಿಸಿಕೊಂಡಿದ್ದಾರೆ.
ನವೆಂಬರ್ 10 ರಿಂದ 12 ರ ವರೆಗೆ ಭೂಪಾಲ್‌ನಲ್ಲಿ ನಡೆಯುವ ರಾಷ್ಟಮಟ್ಟದ ಮಾಸ್ಟರ್ಸ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್ಗೆ ಆಯ್ಕೆಯಾಗಿದ್ದು, ಅಲ್ಲಿ ನಡೆಯುವ ಈಜು ಸ್ಪರ್ಧೆಗಳಲ್ಲಿ ಭಾಗವಹಿಸುವರು ಎಂದು ಮೂಲಗಳು ತಿಳಿಸಿದವು.